ಕಾಸರಗೋಡು: ಪುಸ್ತಕ ಓದುವ ಹವ್ಯಾಸ ನಮ್ಮನ್ನು ಹೆಚ್ಚು ಬೌದ್ಧಿಕತೆಯೆಡೆಗೆ ಕೊಂಡೊಯ್ಯುತ್ತದೆ ಎ0ದು ಕೇಂದ್ರೀಯ ವಿಶ್ವವಿದ್ಯಾಲಯದ ಸಾಹಿತ್ಯಿಕ ಹಾಗೂ ತೌಲನಿಕ ಅಧ್ಯಯನ ವಿಭಾಗದ ಪೆÇ್ರ| ಇಫ್ತಿಕರ್ ತಿಳಿಸಿದ್ದಾರೆ. ಅವರು ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿನಡೆದ 'ವಾಚನಾ ಸಪ್ತಾಹ;ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾಥನಾಡಿದರು.
ಒಂದು ವಾರಕ್ಕೆ ಸೀಮಿತವಾಗದೆ, ಪ್ರತಿದಿನ ಪುಸ್ತಕ, ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾಲಯದ ಪ್ರಾಂಶುಪಾಲ ಡಾ. ಬಿಜು ಮಡತ್ತಿಲ್ ಅವರು ವಾಚನ ಸಪ್ತಾಹದ ರೂವಾರಿ ಪಿ.ಎನ್. ಫಣಿಕ್ಕರ್ ಅವರ ಲಕ್ಷ್ಯ ಹಾಗೂ ವಾಚನಾ ಸಪ್ತಾಹದ ಉದ್ದೇಶವನ್ನು ತಿಳಿಯಪಡಿಸಿದರು. ಕು.ಅನ್ವಿತಾ ಕಾಮತ್ ಹಾಗೂ ಕು. ವರ್ಷ ಕವಿತೆಗಳನ್ನು ವಾಚಿಸಿದರು. ಕು.ಹರ್ಷಿಣಿ ಹರಿಹರನ್ ಸ್ವಾಗತಿಸಿದರು. ಕು. ಲಿನ ವಂದಿಸಿದರು.



