ಕಾಸರಗೋಡು: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಚೈತನ್ಯ ಟ್ರಸ್ಟ್(ರಿ) ಇದರ ನೇತೃತ್ವದಲ್ಲಿ ಚೈತನ್ಯ ವಿದ್ಯಾಲಯದ ಸಭಾಂಗಣದಲ್ಲಿ ಯೋಗ ಪ್ರದರ್ಶನ ನಡೆಯಿತು. ಈ ಸಂದರ್ಭ ಯೋಗವನ್ನುಕಾಸರಗೋಡಿನಲ್ಲಿ ಜನಪ್ರಿಯಗೊಳಿಸುವುದರಲ್ಲಿ ನಿಸ್ವಾರ್ಥ ಸೇವೆಗೈದ ಶ್ರೀ ದೇವದಾಸ್ ಕೊರಕ್ಕೋಡ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ವಿದ್ಯಾಲಯ ಪ್ರಬಂಧಕ ನಾಗೇಶ್ ಬಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಭಾರತಿ ದಕ್ಷಿಣ ಕ್ಷೇತ್ರ ಶಿಶುವಾಟಿಕ ಪ್ರಮುಖ್ ಕೃಷ್ಣದಾಸ್ ಪಿ ಕೆ ಮುಖ್ಯ ಅತಿಥಿಗಳಾಗಿದ್ದರು. ವಿದ್ಯಾಲಯ ಆಡಳಿತಾಧಿಕಾರಿಗಳಾದ ರಮೇಶ್ ಕೆ ಸನ್ಮಾನಿತರ ಪರಿಚಯ ಮಾಡಿದರು. ವಿದ್ಯಾಲಯ ಪ್ರಾಂಶುಪಾಲರಾದ ಪಿ. ರವಿಚಂದ್ರನ್ ಸ್ವಾಗತಿಸಿ, ಟ್ರಸ್ಟ್ ಕಾರ್ಯದರ್ಶಿ ಮೋಹನ್ ಯಂ ವಂದಿಸಿದರು. ಈ ಸಂದರ್ಭ ವಿದ್ಯಾಲಯದ ಮಕ್ಕಳಿಂದ ಯೋಗ ಪ್ರದರ್ಶನ ನಡೆಯಿತು.





