ಕಾಸರಗೋಡು: ಲಾರಿಯಲ್ಲಿ ಸಾಗಿಸುತ್ತಿದ್ದ ಕಬ್ಬಿಣದ ಸಲಾಕೆ ಏಕಾಏಕಿ ರಸ್ತೆಗೆ ಜಾರಿಬಿದ್ದ ಪರಿಣಾಮ ಹಲವು ತಾಸುಗಳ ಕಾಲ ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಕಾಸರಗೋಡು ಎಂ.ಜಿ ರಸ್ತೆಯ ಆನೆಬಾಗಿಲು ಬಳಿ ಗುರುವಾರ ಘಟನೆ.
ಕಟ್ಟಡ ನಿರ್ಮಾಣಕ್ಕಾಗಿ ಮಂಗಳೂರಿನಿಂದ ಕಾಸರಗೋಡಿನ ಹಾರ್ಡ್‍ವೇರ್ ಅಂಗಡಿಯೊಂದಕ್ಕೆ ಅರ್ಧದಷ್ಟು ಕಬ್ಬಿಣದ ಸಲಾಕೆ ಇಳಿಸಿ, ಉಳಿದ ಸರಕಿನೊಂದಿಗೆ ವಾಪಸಾಗುತ್ತಿದ್ದಂತೆ ಏಕಾಏಕಿ ಲಾರಿಯಿಂದ ಹಿಂದಕ್ಕೆ ಜಾರಿ ರಸ್ತೆಗೆ ಬಿದ್ದಿದೆ. ಈ ಸಂದರ್ಭ ಹಿಂದಿನಿಂದ ವಾಹನಗಳಿಲ್ಲದ ಕಾರಣ ದುರಂತ ತಪ್ಪಿತ್ತು. ಕಬ್ಬಿಣದ ಸಲಾಕೆಯನ್ನು ಸೂಕ್ತ ರೀತಿಯಲ್ಲಿ ಬಿಗಿಯದೆ ಸಾಗಿಸಿರುವುದರಿಂದ ಕಬ್ಬಿಣದ ಸಲಾಕೆ ರಸ್ತೆಗೆ ಬೀಳುವಂತಾಗಿತ್ತು.




