HEALTH TIPS

ರೇವತಿ ತಿರುನಾಳ್ ಪಿ.ರಾಮವರ್ಮ ರಾಜ ನಿಧನ

            ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ದೇವರ ಪಿತೃಸ್ಥಾನೀಯ, ಪಂದಳಂ ವಲಿಯತಂಬುರಾನ್ ರೇವತಿ ತಿರುನಾಳ್ ಪಿ.ರಾಮವರ್ಮ ರಾಜ(102)ಗುರುವಾರ ನಿಧನರಾರು. ಪಂದಳಂ ರಾಜಮನೆತನದ ಹಿರಿಯ ಸದಸ್ಯರಾಗಿದ್ದ ಅವರು 2002ರಂದು ಪಂದಳಂ ವಲಿಯ ತಂಬುರಾನ್ ಆಗಿ ಪಟ್ಟ ಅಲಂಕರಿಸಿದ್ದರು. ಪಂದಳ ರಾಜನಾಗಿ ಅಧಿಕಾರ ವಹಿಸಿಕೊಂಡು ಸೇವೆ ಆರಂಭಿಸಿದ್ದ ಇವರು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗಾಗಿ ತನ್ನ ಸೇವೆ ಮುಡಿಪಾಗಿಟ್ಟಿದ್ದರು. ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ತೊಡಿಸುವ ತಂಗ ಅಂಗಿ ಸೇರಿದಂತೆ ಪವಿತ್ರ ಆಭರಣಗಳ ಮೆರವಣಿಗೆ ಪಂದಳ ರಾಜರ ಅನುಮತಿಯೊಂದಿಗೆ ಆರಂಭಗೊಳ್ಳುವುದು ವಾಡಿಕೆಯಾಗಿದೆ. ಇವರ ಪತ್ನಿ ಲಕ್ಷ್ಮೀ ತಂಬುರಾಟಿ 2017ರಲ್ಲಿ ನಿಧನರಾಗಿದ್ದರು. ಇವರು ನಾಲ್ಕು ಮಂದಿ ಮಕ್ಕಳನ್ನು ಅಗಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries