HEALTH TIPS

ಸಿಡಿಎಸ್ ನೇಮಕಾತಿ ನಿಯಮ ಸಡಿಲಿಸಿದ ಕೇಂದ್ರ: ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳನ್ನು ಆಯ್ಕೆ ಮಾಡಬಹುದು

 ನವದೆಹಲಿ: ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರ (ಡಿಸಿಎಸ್) ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿಯಮಗಳನ್ನು ಸಡಿಲಗೊಳಿಸಿದ್ದು, 62 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೂರು ಸೇನೆಗಳಲ್ಲಿ ಯಾವುದೇ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಲೆಫ್ಟಿನೆಂಟ್ ಜನರಲ್, ಏರ್ ಮಾರ್ಷಲ್ ಮತ್ತು ವೈಸ್ ಅಡ್ಮಿರಲ್ ಸಹ ಸಿಡಿಎಸ್ ಹುದ್ದೆಗೆ ಅರ್ಹರಾಗಿರುತ್ತಾರೆ ಎಂದು ಹೇಳಿದೆ.

ಈ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಗಳ ಪ್ರಕಾರ, ಸೇನಾಪಡೆ, ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಮುಖ್ಯಸ್ಥರ ಜೊತೆಗೆ ಈ ಮೂರು ಸೇನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇತರೆ ಉನ್ನತ ಅಧಿಕಾರಿಗಳನ್ನು ಸಹ ಸಿಡಿಎಸ್ ಹುದ್ದೆಗೆ ಪರಿಗಣಿಸಬಹುದು ಎಂದು ಹೇಳಿದೆ. ಈ ಮೂಲಕ ಸೇನಾ ಪಡೆ, ವಾಯು ಪಡೆ ಅಥವಾ ನೌಕಾ ಪಡೆಯಲ್ಲಿನ ಎರಡನೇ ಅತ್ಯುನ್ನತ ದರ್ಜೆಯ ಅಧಿಕಾರಿಗಳು ತಮ್ಮ ಹಿರಿಯ ಅಧಿಕಾರಿಗಳನ್ನು ಹಿಂದಿಕ್ಕಿ ಸಿಡಿಎಸ್ ಹುದ್ದೆಗೆ ಏರಲು ದಾರಿ ಮಾಡಿಕೊಡಲಾಗಿದೆ.

ಡಿಸೆಂಬರ್ 8 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ ಸಾವನ್ನಪ್ಪಿದ ನಂತರ ಸಿಡಿಎಸ್ ಹುದ್ದೆ ಖಾಲಿ ಇದೆ.

ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾಗಿರುವ ಲೆಫ್ಟಿನೆಂಟ್ ಜನರಲ್, ಏರ್ ಮಾರ್ಷಲ್ ಅಥವಾ ವೈಸ್ ಅಡ್ಮಿರಲ್ ಅವರನ್ನು ಸಿಡಿಎಸ್ ಆಗಿ ನೇಮಕ ಮಾಡಲು ಅರ್ಹರಾಗುವಂತೆ ಮಾಡಲು ಏರ್ ಫೋರ್ಸ್ ಆಕ್ಟ್, ಆರ್ಮಿ ಆಕ್ಟ್ ಮತ್ತು ನೌಕಾಪಡೆಯ ಕಾಯಿದೆಯನ್ನು ತಿದ್ದುಪಡಿ ಮಾಡಿ ಸರ್ಕಾರ ಸೋಮವಾರ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ.

ರಕ್ಷಣಾ ಪಡೆಗಳ ಮುಖ್ಯಸ್ಥರ ಸೇವೆಯ ಅವಧಿಯು ಗರಿಷ್ಠ 65 ವರ್ಷವಾಗಿದೆ. ಆದರೆ, ಸರ್ಕಾರ ಬಯಸಿದ್ದಲ್ಲಿ ಅದನ್ನು ವಿಸ್ತರಣೆ ಮಾಡಲು ಅವಕಾಶವಿದೆ. ಮೂರು ಸೇನೆಗಳ ಮುಖ್ಯಸ್ಥರ ಅವಧಿಯು ಮೂರು ವರ್ಷ ಅಥವಾ ಅವರಿಗೆ 62 ವರ್ಷ ತುಂಬುವವರೆಗೆ ಇರುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries