HEALTH TIPS

ಎಂಡೋ ಸಂತ್ರಸ್ತರ ಬಗ್ಗೆ ಸರ್ಕಾರ ಮಾನವೀಯ ಧೋರಣೆ ತಳೆಯಬೇಕು: ಕುಮ್ಮನಂ ರಾಜಶೇಖರನ್

               ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಕುಟುಂಬಗಳಿಗೆ ಅಗತ್ಯ ಸವಲತ್ತು ಒದಗಿಸಿಕೊಡುವುದರ ಮೂಲಕ ರಾಜ್ಯ ಸರ್ಕಾರ ಅವರೊಂದಿಗೆ ಮಾನವೀಯವಾಗಿ ನಡೆದುಕೊಳ್ಳಬೇಕು ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ. 

            ಜಿಲ್ಲೆಯ ಕಾರಡ್ಕ, ಬೆಳ್ಳೂರು, ಕುಂಬ್ಡಾಜೆ ಹಾಗೂ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಹಾಗೂ ಬಜPಕೂಡ್ಲುವಿನಲ್ಲಿರುವ ಬಡ್ಸ್ ಶಾಲೆಗಳಿಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡುತ್ತಿದ್ದರು. 

              ಸರ್ಕಾರ ಘೋಷಿಸಿದ ಸವಲತ್ತುಗಳೇ ಸಿಗದ ಹಲವಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದೆ. ಒಳರೋಗಿಗಳೂ ಸೇರಿದಂತೆ ಸರ್ಕಾರದ ಬಳಿ ಎಂಡೋಸಲ್ಫಾನ್ ಸಂತ್ರಸ್ತರ ಸೂಕ್ತ ಲೆಕ್ಕಾಚಾರ ಇನ್ನೂ ಲಭ್ಯವಿಲ್ಲ.  ಮೂಲಸೌಕರ್ಯಗಳಾದ ಉತ್ತಮ ರಸ್ತೆ,  ಮನೆ, ಶುದ್ಧ ಕುಡಿಯುವ ನೀರಿನ ಲಭ್ಯತೆಯಿಲ್ಲದೆ ಹಲವಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದ್ದು ಇಂತಹ  ಹೃದಯವಿದ್ರಾವಕ ದೃಶ್ಯಗಳನ್ನು ಮುಖ್ಯಮಂತ್ರಿ ಖುದ್ದಾಗಿ ಕಂಡುಕೊಳ್ಳಬೇಕು ಎಂದು ಕುಮ್ಮನ್ ಆಗ್ರಹಿಸಿದರು. ಸಂತ್ರಸ್ತರ ಪಟ್ಟಿಯಲ್ಲಿ ಒಳಪಡದ ಹಲವಾರು ಮಂದಿ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದು ಇವರೆಲ್ಲರನ್ನೂ ಪಟ್ಟಿಗೆ ಸೇರಿಸಿ, ಇವರಿಗೆ ಅಗತ್ಯ ಸವಲತ್ತು ಒದಗಿಸಿಕೊಡಲು ಸರ್ಕಾರ ತಕ್ಷಣ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದರು.

               ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರ್, ಉಪಾಧ್ಯಕ್ಷೆ ಸುಧಾಮ ಗೋಸಾಡ, ರಾಷ್ಟ್ರೀಯ ಸಮಿತಿ ಸದಸ್ಯರಾದ ಎಂ.ಸಂಜೀವ ಶೆಟ್ಟಿ, ಪ್ರಮೀಳಾ ಸಿ.ನಾಯ್ಕ್,  ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್, ಬದಿಯಡ್ಕ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ನಾರಂಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಕಾರಡ್ಕ, ಪಿ.ಆರ್. ಸುನೀಲ್, ಪಂಚಾಯಿತಿ ಮತ್ತು ಬೂತ್ ಸಮಿತಿ ಅಧಿಕಾರಿಗಳು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries