ಕಾಸರಗೋಡು: ಗಲ್ಫ್ ನಿಂದ ಊರಿಗೆ ಬಂದಿದ್ದ ಯುವಕನನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ. ಕಾಸರಗೋಡು ಪುತ್ತಿಗೆ ಸಮೀಪದ ಮುಗುವಿನಲ್ಲಿ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ ಗಲ್ಫ್‍ನಿಂದ ಆಗಮಿಸಿದ್ದ 32 ವರ್ಷದ ಅಬೂಬಕರ್ ಸಿದ್ದಿಕಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಸಿದ್ದಿಕಿಯನ್ನು ಹೊಡೆದು ಸಾಯಿಸಲಾಗಿದೆ ಎಂದು ವರದಿಯಾಗಿದೆ. ಶನಿವಾರ ಮಧ್ಯಾಹ್ನ ಇಬ್ಬರು ವ್ಯಕ್ತಿಗಳು ಸಿದ್ದಿಕಿಯನ್ನು ಕರೆದುಕೊಂಡು ಹೋಗಿದ್ದರು. ಮೃತದೇಹದ ಅಡಿಭಾಗದಲ್ಲಿ ಗಾಯಗಳು ಪತ್ತೆಯಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣವಾಗಿರುವುದು ಖಚಿತವಾಗಿದೆ. ಎರಡು ದಿನಗಳ ಹಿಂದೆ ಸಿದ್ದಿಕ್ ನ ಸಹೋದರ ಸೇರಿದಂತೆ ಇಬ್ಬರು ಸಂಬಂಧಿಕರನ್ನು ಅಪಹರಿಸಲಾಗಿದ್ದು, ಬಳಿಕ ಮನೆಗೆ ಮರಳಿದ್ದರು ಎಂದು ತಿಳಿದು ಬಂದಿದೆ.ಇದರ ಹಿನ್ನೆಲೆಯಲ್ಲಿ ಹಣಕಾಸಿನ ವ್ಯವಹಾರ ಸಂಬಂಧ ಕೊಲೆ ನಡೆದಿರಬೇಕು ಎಂದು ಸಂಶಯಿಸಲಾಗಿದೆ. ಘಟನೆ ಕುರಿತು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.


