ಕಾಸರಗೋಡು: ವಿಶ್ವ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಹೊಸದುರ್ಗ ಜನಮೈತ್ರಿ ಪೆÇೀಲೀಸರು ಮಾದಕ ವಸ್ತು ವಿರೋಧಿ ಸಮುದಾಯದ ‘ಕೂಡೆಯುಂಡು(ಜೊತೆಗಿದ್ದೇವೆ)’ ಪ್ರತಿಜ್ಞೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾಞಂಗಾಡ್ ಹಳೆ ಬಸ್ ನಿಲ್ದಾಣದಲ್ಲಿ ನಡೆದ ಮಾದಕ ವಸ್ತು ವಿರೋಧಿ ಕಾರ್ಯಕ್ರಮವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇಲೀಸ್ ವರಿಷ್ಠ ಡಾ. ವೈಭವ್ ಸಕ್ಸೇನಾ ಮುಖ್ಯ ಅತಿಥಿಯಾಗಿದ್ದರು. ಡಿವೈಎಸ್ಪಿ ಸಿ.ಕೆ.ಸುನೀಲಕುಮಾರ್ ಮಾದಕ ವಸ್ತು ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ಕೌನ್ಸಿಲರ್‍ಗಳಾದ ಕುಸುಮ್, ಅಬ್ದುಲ್ ರೆಹಮಾನ್ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಕಾಸರಗೋಡು ಜಿಲ್ಲಾ ಪೆÇಲೀಸ್ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಟಿ.ಕೆ. ವಿ ಪ್ರಮೋದ್, ಸಹಾಯಕ ಉಪನಿರೀಕ್ಷಕರಾದ ಪಿ. ಕೆ ರಾಮಕೃಷ್ಣನ್, ಕೆ. ಶಶಿಧರನ್ ಮಾತನಾಡಿದರು.
ಸಬ್ ಇನ್ಸ್ ಪೆಕ್ಟರ್ ಕೆ. ಪಿ ಸತೀಶ್ ಸ್ವಾಗತಿಸಿ, ಜನಮೈತ್ರಿ ಬೀಟ್ ಅಧಿಕಾರಿ ರಂಜಿತ್ ಕುಮಾರ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಬೀದಿನಾಟಕ, ಫ್ಲಾಶ್ ಮಾಬ್ ಹಾಗೂ ಜಾದೂ ಪ್ರದರ್ಶನ ನಡೆಯಿತು. ಹೊಸದುರ್ಗ ಹೈಯರ್ ಸೆಕೆಂಡರಿ ಶಾಲೆ, ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಮತ್ತು ಮಡಿಕೈ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಸ್ಟೂಡೆಂಟ್ ಪೆÇೀಲಿಸ್ ಕೆಡೆಟ್, ಅಸೋಸಿಯೇಶನ್, ಕಾಞಂಗಾಡ್ ಪ್ರೆಸ್ ಕ್ಲಬ್, ಆಟೋ ಕಾರ್ಮಿಕರ ಸಂಘಗಳು ಮತ್ತು ಬಸ್ ಮಾಲಕರ ಸಂಘದ ಸಹಯೋಗದಲ್ಲಿ ಒಂದು ದಿನದ ಮಾದಕ ದ್ರವ್ಯ ವಿರೋಧಿ ಅಭಿಯಾನವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಪ್ರಯಾಣಿಕರನ್ನು ಹತ್ತಿಸಿ ಜಾಗೃತಿ ಮೂಡಿಸಿದರು. ಬಸ್‍ಗಳಲ್ಲಿ ಜಾಗೃತಿ ಸ್ಟಿಕ್ಕರ್‍ಗಳನ್ನು ಸಹ ಅಂಟಿಸಲಾಗಿದೆ.


