ಕಾಸರಗೋಡು: ಕೇರಳ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರಿಗೆ ಸ್ವ-ಉದ್ಯೋಗಕ್ಕಾಗಿ ಸಾಲವನ್ನು ಒದಗಿಸುತ್ತದೆ. ಸಾಲ ಪಡೆಯಲು ಆಸ್ತಿಯ ಗ್ಯಾರಂಟಿ ಅಥವಾ ಸರ್ಕಾರಿ ಉದ್ಯೋಗಿಯೊಬ್ಬರ ಜಾಮೀನಿನ ಅಗತ್ಯವಿರುತ್ತದೆ.
ಕುಟುಂಬಶ್ರೀ ಸಿಡಿಎಸ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ ಜಾಮೀನಿನ ಅಗತ್ಯವಿರುವುದಿಲ್ಲ. ಆಸಕ್ತ ಮಹಿಳೆಯರು ಮಹಿಳಾ ಅಭಿವೃದ್ಧಿ ನಿಗಮದ ಕಾಞಂಗಾಡಿನಲ್ಲಿರುವ ಜಿಲ್ಲಾ ಕಛೇರಿ ಪರ್ಕಿಸಬೇಕು. ಅರ್ಜಿ ನಮೂನೆಯು www.kswdc.org ವೆಬ್‍ಸೈಟ್‍ನಲ್ಲಿಯೂ ಲಭ್ಯವಿದೆ. ಈ ಬಗ್ಗೆ ಮಾಃಇತಿಗಾಗಿ ದೂರವಾಣಿ ಸಂಖ್ಯೆ (0467-2999940, 9496015014)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

