HEALTH TIPS

ಕಾಸರಗೋಡಿನಲ್ಲಿ 43 ಕುಟುಂಬಶ್ರೀ ಜನಪ್ರಿಯ ಹೋಟೆಲ್‍ಗಳು

                   ಕಾಸರಗೋಡು: ಜಿಲ್ಲೆಯಲ್ಲಿ 43 ಜನಪ್ರಿಯ ಹೋಟೆಲ್‍ಗಳು ಜಿಲ್ಲೆಯ 178 ಮಹಿಳೆಯರಿಗೆ ಉದ್ಯೋಗ ನೀಡುತ್ತಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 37 ಹಾಗೂ ನಗರ ಪ್ರದೇಶದಲ್ಲಿ ಆರು ಜನಪ್ರಿಯ ಹೋಟೆಲ್‍ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪರಿಶಿಷ್ಟ ಪಂಗಡದ ಪ್ರದೇಶದಲ್ಲಿ 32 ಮತ್ತು ಕರಾವಳಿ ಪ್ರದೇಶದಲ್ಲಿ ಒಂಬತ್ತು ಹೋಟೆಲ್‍ಗಳಿವೆ. ಕಾಞಂಗಾಡ್, ನೀಲೇಶ್ವರಂ ಬ್ಲಾಕ್ ಪಂಚಾಯಿತಿಯಲ್ಲಿ ಒಂಬತ್ತು, ಪರಪ್ಪ ಬ್ಲಾಕ್ ಪಂಚಾಯಿತಿನಲ್ಲಿ ಏಳು ಮತ್ತು ಕಾರಡ್ಕ, ಕಾಸರಗೋಡು ಮತ್ತು ಮಂಜೇಶ್ವರಂ ಬ್ಲಾಕ್‍ಗಳಲ್ಲಿ ತಲಾ ಆರು ಸಾರ್ವಜನಿಕ ಹೋಟೆಲ್‍ಗಳಿವೆ.

               ಕುಟುಂಬಶ್ರೀ ಮಹಿಳೆಯರ ಜೀವನೋಪಾಯವನ್ನು ಖಚಿತಪಡಿಸುವುದು ಮತ್ತು ಆ ಮೂಲಕ ಅವರ ಆರ್ಥಿಕ ಸಮೃದ್ಧಿಯನ್ನು ಖಚಿತಪಡಿಸುವುದು ಜನಪ್ರಿಯ ಹೋಟೆಲ್‍ಗಳ ಮುಖ್ಯ ಉದ್ದೇಶಗಳಾಗಿದೆ. ಜಿಲ್ಲೆಯ ಎಲ್ಲ ಕುಟುಂಬಶ್ರೀ ಜನಪ್ರಿಯ ಹೋಟೆಲ್ ಗಳು ಉತ್ತಮವಾಗಿ ನಡೆಯುತ್ತಿದ್ದು, ಆಯಾ ಪ್ರದೇಶದ ಸ್ಥಳೀಯ ಅಭಿರುಚಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿರುವುದಾಗಿ ಕುಟುಂಬಶ್ರೀ ಜಿಲ್ಲಾ ಸಂಯೋಜಕ ಟಿ.ಟಿ.ಸುರೇಂದ್ರನ್ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries