HEALTH TIPS

ಲೀನಾ ಮಣಿಮೇಕಲೈ ಅವರ 'ಕಾಳಿ' ಸಾಕ್ಷ್ಯಚಿತ್ರದ ಪೋಸ್ಟರ್‌ ತಡೆಹಿಡಿದ ಟ್ವಿಟರ್‌

          ನವದೆಹಲಿ: ನಟಿ, ನಿರ್ದೇಶಕಿ, ಕವಯತ್ರಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರ 'ಕಾಳಿ' ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ ತಡೆಹಿಡಿದಿದೆ.

          ಕಾಳಿ ಪೋಸ್ಟರ್‌ ಮೂಲಕ ಹಿಂದೂ ದೇವರಿಗೆ ಅವಮಾನ ಮಾಡಲಾಗಿದೆ ಎಂಬ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಟ್ವಿಟರ್‌ ಈ ನಿರ್ಧಾರ ಕೈಗೊಂಡಿದೆ.

           ಜುಲೈ 2ರಂದು 'ಕಾಳಿ' ಸಾಕ್ಷ್ಯಚಿತ್ರದ ಪೋಸ್ಟರ್‌ಅನ್ನು ಲೀನಾ ಟ್ವೀಟ್‌ ಮಾಡಿದ್ದರು. ಅದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯು ಸಿಗರೇಟ್‌ ಸೇದುತ್ತಿರುವುದು ಹಾಗೂ ಕೈಯಲ್ಲಿ ಎಲ್‌ಜಿಬಿಟಿಕ್ಯೂ(LGBTQ) ಸಮುದಾಯದ ಧ್ವಜವನ್ನು ಹಿಡಿದಿರುವ ಅವತಾರದಲ್ಲಿ ತೋರಿಸಲಾಗಿತ್ತು.

'ಕಾನೂನು ಕ್ರಮಕ್ಕೆ ಆಗ್ರಹ ಕೇಳಿಬಂದಿರುವ ಹಿನ್ನೆಲೆ ಭಾರತದಲ್ಲಿ ಲೀನಾ ಮಣಿಮೇಕಲೈ ಅವರ ಟ್ವೀಟ್‌ ಅನ್ನು ತಡೆಹಿಡಿಯಲಾಗಿದೆ' ಎಂದು ಮೂಲ ಟ್ವೀಟ್‌ನ ಜಾಗದಲ್ಲಿ ಕಾಣಿಸುತ್ತಿದೆ. ಯಾವಾಗ ಈ ಟ್ವೀಟ್‌ಅನ್ನು ಟ್ವಿಟರ್‌ ತೆಗೆದುಹಾಕಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

              ಕಾಳಿ ಮಾತೆಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿ ಮಣಿಮೇಕಲೈ ವಿರುದ್ಧ ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries