HEALTH TIPS

ನೀಟ್ ಪರೀಕ್ಷೆ; ಬಾಲಕಿಯರ ಒಳ ಉಡುಪುಗಳನ್ನೂ ಕಿತ್ತೆಸೆದ ಅಧಿಕೃತರು: ಬಾಲಕಿಯ ದೂರಿನ ವಿಚಾರಣೆಗೆ ಮಾನವ ಹಕ್ಕುಗಳ ಆಯೋಗ ಆದೇಶ

   

                   ಕೊಲ್ಲಂ: ನೀಟ್ ಪರೀಕ್ಷೆಗೆ ಹಾಜರಾದ ಬಾಲಕಿಯ ಒಳಉಡುಪುಗಳನ್ನು ಪರೀಕ್ಷೆಯ ಉದ್ದೇಶದಿಂದ ಕಿತ್ತೆಸೆದಿರುವ ದೂರಿನ ಕುರಿತು ಮಾನವ ಹಕ್ಕುಗಳ ಆಯೋಗ ತನಿಖೆಗೆ ಆದೇಶಿಸಿದೆ. ಕೊಲ್ಲಂನ ಆಯೂರಿನಲ್ಲಿರುವ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಬಂದ ಬಾಲಕಿಯರ ಒಳಉಡುಪುಗಳನ್ನು ಅಧಿಕಾರಿಗಳು ತೆಗೆಸಿದ್ದಾರೆ ಎಂದು ದೂರಲಾಗಿದೆ.

                ಕೊಲ್ಲಂ ಗ್ರಾಮಾಂತರ ಎಸ್ಪಿ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ವಿ.ಕೆ.  ಬಿನಾಕುಮಾರಿ ಆದೇಶಿಸಿದ್ದಾರೆ. ಘಟನೆ ವಿವಾದವಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

                   ರಾಜ್ಯ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಇಂತಹ ನಾಚಿಗೇಡಿನ ಕ್ರಮದ ವಿರುದ್ಧ ಹರಿಹಾಯ್ದರು. ಇಂತಹ ತಪಾಸಣೆ ಖಂಡನೀಯ ಎಂದು ಸಚಿವರು ಹೇಳಿರುವರು. ಪರೀಕ್ಷೆಯನ್ನು ನಡೆಸಲು ನೇಮಕಗೊಂಡ ಏಜೆನ್ಸಿಯ ಭಾಗವಾಗಿರುವ ವ್ಯಕ್ತಿಗಳಿಂದ ಪರೀಕ್ಷೆಯನ್ನು ನಡೆಸಲಾಯಿತು. ಸಂಸ್ಥೆಯ ಕಡೆಯಿಂದ ಬಹುದೊಡ್ಡ ತಪ್ಪು ನಡೆದಿದೆ ಎಂದು ಆರ್.ಬಿಂದು ಆರೋಪಿಸಿದರು. ಘಟನೆಯ ಬಗ್ಗೆ ರಾಜ್ಯ ಸರ್ಕಾರದ ಅಸಮಾಧಾನವನ್ನು ಕೇಂದ್ರ ಸಚಿವಾಲಯಕ್ಕೆ ತಿಳಿಸಲಾಗುವುದು ಎಂದು ಅವರು ಹೇಳಿದರು.

                        ನೀಟ್ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಯುವ ಭಾಗವಾಗಿ ಪರೀಕ್ಷೆಗಳನ್ನು ಬಿಗಿಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆಯನ್ನೂ ನಿಗದಿಪಡಿಸಲಾಗಿತ್ತು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries