HEALTH TIPS

ವೈರಲ್‌: ಆಮೆಗೆ ಸಹಾಯ ಮಾಡಿದ ಎಮ್ಮೆ, ಈ ವೀಡಿಯೋ ನೋಡಿದ ನೆಟ್ಟಿಗರು ಫುಲ್‌ ಫಿದಾ

 ಕೆಲವೊಮ್ಮೆ ಮನುಷ್ಯರು ಮನುಷ್ಯತ್ವ ಮರೆತು ವರ್ತಿಸುತ್ತಾರೆ, ಮಾನವೀಯತೆ ಗುಣ ಮನುಷ್ಯರಲ್ಲಿ ಮಾತ್ರ ಇರುತ್ತದೆ ಎಂದು ನಾವೆಂದುಕೊಳ್ಳುತ್ತೇವೆ, ಆದರೆ ನಮ್ಮಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುತ್ತವೆ. .

ಅಂಥ ಎಷ್ಟೋ ಘಟನೆಗಳನ್ನು ಆಗಾಗ ನೋಡುತ್ತಲೂ ಇರುತ್ತೇವೆ, ನಾಯಿ ಮರಿಗೆ ಹಾಲುಣಿಸಿದ ಹಸು, ಆಹಾರಕ್ಕಾಗಿ ತಾನು ಹಿಡಿದ ಜಿಂಕೆ ಗರ್ಭಿಣಿಯೆಂದು ತಿಳಿದಾಗ ಬಿಟ್ಟು ಹೋದ ಮೊಸಳೆ ಇಂಥ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೇವೆ, ವೀಡಿಯೋಗಳನ್ನು ನೋಡಿರುತ್ತೇವೆ, ಅಂಥದ್ದೇ ಒಂದು ವೀಡಿಯೋ ವೈರಲ್ ಆಗುತ್ತಿದೆ.




ಆಮೆಯೊಂದನ್ನು ಎಮ್ಮೆ ಕಾಪಾಡಿರುವ ವೀಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಮಾನವೀಯತೆ ಎಂಬುವುದು ಮನುಷ್ಯನಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುತ್ತದೆ ಎಂಬುವುದಕ್ಕೆ ಉದಾಹರಣೆ ಈ ವೀಡಿಯೋ...

ಆಮೆಯೊಂದು ಮಗುಚಿ ಬಿದ್ದಿತ್ತು. ಅದು ಹಾಗೆ ಉಲ್ಟಾ ಅಸಹಾಯಕವಾಗಿ ಬಿದ್ದಾಗ ಅಲ್ಲಿಗೆ ಬಂದ ಎಮ್ಮೆ ಅದನ್ನು ನೋಡಿ ತನ್ನ ಕೊಂಬಿನಿಂದ ನೂಕಿ ಸರಿಯಾಗಿ ಮಾಡಿ ಆಮೆ ಚಲಿಸುವಂತೆ ಮಾಡಿದೆ.

ಆಮೆಗೆ ಎಮ್ಮೆ ಮಾಡಿದ ಸಹಾಯದ ವೀಡಿಯೋವನ್ನು ಡಾಗ್ಸ್‌ ಅಂಡ್‌ ವೈಲ್ಡ್‌ ಎನಿಮಲ್ಸ್‌ ಇನ್‌ಸ್ಟಾಗ್ರಾಮ್‌ ಅಕೌಂಡ್‌ನಲ್ಲಿ ಶೇರ್‌ ಮಾಡಲಾಗಿದ್ದು ಈ ವೀಡಿಯೋ ವೈರಲ್‌ ಆಗಿದೆ. ಈ ವೀಡಿಯೋಗೆ 5 ಮಿಲಿಯನ್‌ಗೂ ಅಧಿಕ ವ್ಯೂವ್ಸ್ ಬಂದಿದೆ, ಈ ವೀಡಿಯೋವನ್ನು ನೆಟ್ಟಿಗರು ತುಂಬಾನೇ ಮೆಚ್ಚಿಕೊಂಡಿದ್ದು ಸಕತ್‌ ವೈರಲ್‌ ಆಗುತ್ತಿದೆ.

https://www.instagram.com/p/CfCpjyOJKfe/



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries