HEALTH TIPS

VIDEO: ಇಲ್ಲಿದೆ ಚೆಸ್​​​ ಬೋರ್ಡ್​​ನಂತೆ ಚಿತ್ರಿಸಲಾದ ಆಕರ್ಷಕ ಸೇತುವೆ!

            ಚೆನ್ನೈ: ಚೆಸ್​​ನಂತೆ ಚಿತ್ರಿಸಲಾಗಿರುವ ಈ ಆಕರ್ಷಕ ಸೇತುವೆ ವಿದೇಶದಲ್ಲಿದೆಯೇ ಎಂದು ಊಹಿಸಿದರೆ ಖಂಡಿತ ಇಲ್ಲ. ಇದು ನಮ್ಮ ದೇಶದ ನೆರೆಯ ರಾಜ್ಯದಲ್ಲೇ ಇದೆ.ಚೆಸ್​​ ರಾಜಧಾನಿ ಎಂದೇ ಕರೆಯಲ್ಪಡುವ ಚೆನ್ನೈನಲ್ಲಿ ಚೆಸ್​ ಮಾದರಿಯಲ್ಲೇ ಸೇತುವೆಯನ್ನು ಚಿತ್ರಿಸಲಾಗಿರುವುದು ಇದೀಗ ಭಾರೀ ಗಮನ ಸೆಳೆಯುತ್ತಿದೆ.


              ಮಹಾಬಲಿಪುರಂನಲ್ಲಿ ಜುಲೈ 28ರಂದು ಚೆಸ್​ ಒಲಂಪಿಯಾಡ್​ ಆರಂಭವಾಗುವ ಹಿನ್ನಲೆಯಲ್ಲಿ ಇಲ್ಲಿನ ನಾಪಿಯರ್​ ಸೇತುವೆಯನ್ನು ಸಂಪೂರ್ಣವಾಗಿ ಚೆಸ್​ನಂತೆ ಚಿತ್ರಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

            ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹೋ ಅವರು ಈ ಸೇತುವೆ ಮೇಲೆ ಪ್ರಯಾಣ ಬೆಳಸಿದ ವೇಳೆ ವಿಡಿಯೋ ಚಿತ್ರಿಸಿದ್ದು, 202ರ ಗ್ಯ್ರಾಂಡ್ ಒಲಂಪಿಯಾಡ್​ ಎಂಬ ಶೀರ್ಷಿಕೆಯೊಂದಿಗೆ ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries