ಲಖನೌ: ಉತ್ತರ ಪ್ರದೇಶದ ಲಖನೌ ಮತ್ತು ದೆಹಲಿಗೆ ಸಂಪರ್ಕ ಕಲ್ಪಿಸುವ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. 2020ರ ಫೆಬ್ರುವರಿ 29ರಿಂದ ಶುರುವಾಗಿರುವ ಈ ಕಾಮಗಾರಿ ಇದೀಗ ಮುಗಿದಿದ್ದು, ಪ್ರಧಾನಿ ಉದ್ಘಾಟನೆ ಮಾಡಿದ್ದಾರೆ.
0
samarasasudhi
ಜುಲೈ 16, 2022
ಲಖನೌ: ಉತ್ತರ ಪ್ರದೇಶದ ಲಖನೌ ಮತ್ತು ದೆಹಲಿಗೆ ಸಂಪರ್ಕ ಕಲ್ಪಿಸುವ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. 2020ರ ಫೆಬ್ರುವರಿ 29ರಿಂದ ಶುರುವಾಗಿರುವ ಈ ಕಾಮಗಾರಿ ಇದೀಗ ಮುಗಿದಿದ್ದು, ಪ್ರಧಾನಿ ಉದ್ಘಾಟನೆ ಮಾಡಿದ್ದಾರೆ.
14,850 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. 296 ಕಿ.ಮೀ ಉದ್ದದ ಚತುಷ್ಪಥ ಎಕ್ಸ್‌ಪ್ರೆಸ್‌ವೇ ಇದಾಗಿದೆ. ಇದರಿಂದ ಚಿತ್ರಕೂಟ, ಬಂದಾ, ಮಹೋಬಾ, ಹಮೀರ್‌ಪುರ, ಜಲೌನ್, ಔರೈಯಾ ಮತ್ತು ಇಟಾವಾ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ದೆಹಲಿ ಮತ್ತು ಚಿತ್ರಕೂಟವನ್ನು ಈ ಹೆದ್ದಾರಿಯಿಂದಾಗಿ 630 ಕಿಲೋ ಮೀಟರ್ ಅಂತರವನ್ನು ಕೇವಲ ಆರು ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ.
ಈ ಎಕ್ಸ್‌ಪ್ರೆಸ್‌ವೇ ನಲ್ಲಿ 250 ಸಣ್ಣ ಸಣ್ಣ ಸೇತುವೆಗಳು, 15ಕ್ಕೂ ಅಧಿಕ ಮೇಲ್ಸೆತುವೆಗಳು, ಆರು ಟೋಲ್ ಪ್ಲಾಜಾ, 12ಕ್ಕೂ ಅಧಿಕ ಬೃಹತ್ ಸೇತುವೆಗಳು ಮತ್ತು ನಾಲ್ಕು ರೈಲು ಹಳಿಗಳು ಇವೆ. ಈ ಎಕ್ಸ್ಪ್ರೆಸ್ವೇನಲ್ಲಿ 24 ಗಂಟೆ ಪೊಲೀಸರು ಲಭ್ಯ ಇರಲಿದ್ದು, ಅಂಬುಲೆನ್ಸ್ ಸೇವೆಯೂ ಇದೆ.

ಬಂಡ್ಲೆಖಂಡ್ ಎಕ್ಸ್‌ಪ್ರೆಸ್‌ವೇ ದೆಹಲಿ ಸೇರಿದಂತೆ ಇತರ ರಾಜ್ಯಗಳಿಗೆ ಜನರನ್ನು ಸಂಪರ್ಕಿಸುತ್ತದೆ. ಇದರಿಂದ ಚಿತ್ರಕೂಟ, ಬಂದಾ, ಮಹೋಬಾ, ಹಮೀರ್‌ಪುರ, ಜಲೌನ್, ಔರೈಯಾ ಮತ್ತು ಇಟಾವಾ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಆದರೆ ಈ ಭಾಗದ ಜನರಿಗೆ ಮಾತ್ರವಲ್ಲದೇ ದೇಶದ ಅಭಿವೃದ್ಧಿಯಲ್ಲಿಯೂ ಇದು ಮಹತ್ತರ ಕೊಡುಗೆ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಉತ್ತರ ಪ್ರದೇಶದಲ್ಲಿನ ಈ ಹೊಸ ಸರ್ಕಾರದಿಂದ, ಎಲ್ಲವೂ ಹೊಸತಾಗಿದೆ. ಹೊಸ ಹೊಸ ಅಭಿವೃದ್ಧಿ ಕಾರ್ಯಗಳು ಶುರುವಾಗಿವೆ, ದೇಶಕ್ಕೆ ಅಮೋಘ ಕೊಡುಗೆ ನೀಡಲಾಗುತ್ತಿದೆ ಎಂದರು.
ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಬುಂದೇಲ್‌ಖಂಡ್ ಪ್ರದೇಶದ ಅಭಿವೃದ್ಧಿಯ ನೇರ ಉದಾಹರಣೆಯಾಗಿದೆ. ಇದು ಈ ಪ್ರದೇಶಕ್ಕೆ ಹೊಸ ಗುರುತನ್ನು ನೀಡುತ್ತದೆ ಮತ್ತು ಕೈಗಾರಿಕಾ ಹೂಡಿಕೆಯ ಮಾರ್ಗವಾಗಿ ಹೊರಹೊಮ್ಮುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.