HEALTH TIPS

ವಿಶ್ವ ಆನೆ ದಿನ 2022: ಆನೆಗಳ ಕುರಿತ ಈ ಆಸಕ್ತಿಕರ ಸಂಗತಿಗಳು ಗೊತ್ತಿದೆಯೇ?

 ಆಗಸ್ಟ್‌ 12ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುವುದು. ಈ ಆಚರಣೆಯ ಹಿಂದೆ ಬಹುದೊಡ್ಡ ಸಂದೇಶ ಇದೆ, ಆನೇಕ ಇಂದಿನ ಗೋಳಿನ ಪರಿಸ್ಥಿತಿಗೆ ಬಗ್ಗೆ ಮನುಷ್ಯನಿಗೆ ಅರಿವು ಮೂಡಿಸಲು ಈ ದಿನ ಆಚರಿಸಲಾಗಿದೆ. ಕಾಡಾನೆಗಳು ಹಾಗೂ ಮನುಷ್ಯರನ ನಡವೆ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ.,ಮನುಷ್ಯ ಕಾಡಿಗೆ ಹೋಗಿ ಕಾಡುಗಳನ್ನು ನಾಶ ಮಾಡಿದ್ದರ ಪರಿಣಾಮ ಕಾಡಾನೆಗಳು ನಾಡಿಗೆ ಬರುತ್ತಿವೆ. ಅಲ್ಲದೆ ಆನೆ ದಂತ ಚೋರರಿಂದ ಆನೆಗಳನ್ನು ರಕ್ಷಣೆ ಮಾಡುವುದು ಕೂಡ ಈ ದಿನದ ಉದ್ದೇಶವಾಗಿದೆ.

ಕಾಡಾನೆಗಳು ಅರಣ್ಯಗಳಲ್ಲಿ ತಿನ್ನುವುದಕ್ಕೆ ಏನೂ ಇಲ್ಲದೆ ನಾಡಿಗೆ ಬರುತ್ತಿವೆ, ನಾಡಿಗೆ ಬಂದಾಗ ಜನರು ಅದರ ಮೇಲೆ ಪಟಾಕಿ ಎಸೆಯುವುದು, ಗುಂಡು ಹೊಡೆಯುವುದು ಈ ರೀತಿಯೆಲ್ಲಾ ಮಾಡುವುದರಿಂದ ಅವುಗಳ ಪ್ರಾಣಕ್ಕೆ ಅಪಾಯ ಉಂಟಾಗುತ್ತಿದೆ.

ಕಾಡಾನೆಗಳಿಂದ ಎಷ್ಟೋ ಮನುಷ್ಯರ ಜೀವಗಳು ಕೂಡ ಹೋಗಿವೆ, ಈ ಕಾಡನೆ ಹಾಗೂ ಮನುಷ್ಯರ ನಡುವೆ ನಿರಂತರ ಸಂಘರ್ಷ ನಡೆಯುತ್ತಿದೆ. ಕಾಡುಗಳನ್ನು ರಕ್ಷಣೆ ಮಾಡಿ ಅವುಗಳಿಗೆ ಆಹಾರ ದೊರೆಯುವಂಥ ವ್ಯವಸ್ಥೆ ಮಾಡಿದರೆ ಕಾಡಾನೆಗಳ ದಾಳಿ ಕಡಿಮೆಯಾಗುವುದು, ಆನೆಯ ಇಂದಿನ ಪರಿಸ್ಥಿತಿ ಹಾಗೂ ಅವುಗಳು ಕೂಡ ನೆಮ್ಮದಿಯ ಬದುಕು ಸಾಗಿಸುವಂತಾಗಲು ಮನುಷ್ಯ ಅರಣ್ಯ ನಾಶ ಮಾಡಬಾರದು. ವಿಶ್ವ ಆನೆ ದಿನವನ್ನು 2012ರಿಂದಲೂ ಆಚರಿಸಿಕೊಂಡು ಬರುತ್ತಿದೆ.

ವಿಶ್ವ ಆನೆ ದಿನದ ವಿಶೇಷವಾಗಿ ನಾವಿಲ್ಲಿ ಆನೆಗಳ ಕುರಿತ ಕೆಲವೊಂದು ಆಸಕ್ತಿಕರ ಸಂಗತಿಗಳ ಬಗ್ಗೆ ಹೇಳಿದ್ದೇವೆ ನೋಡಿ:

1. ಭೂಮಿ ಮೇಲಿನ ಅತಿ ದೊಡ್ಡ ಪ್ರಾಣಿ

ಆಫ್ರಿಕಾದ ಸವನ್ನಹುಲ್ಲುಗಾವಲಿನಲ್ಲಿರುವ ಆನೆಗಳು ತುಂಬಾ ದೊಡ್ಡ ಗಾತ್ರದಲ್ಲಿರುತ್ತವೆ. ಇಲ್ಲಿ ಆನೆಗಳು ಸುಮಾರು 6000ಕೆಜಿ ತೂಕ ಹೊಂದಿರುತ್ತದೆ, ಗಂಡಾನೆ ದೊಡ್ಡ ಗಾತ್ರ ತಲುಪಲು 35-40 ವರ್ಷ ವಯಸ್ಸಾಗಬೇಕು. ಇನ್ನು ಇಲ್ಲಿ ಆನೆಮರಿಗಳು ಹುಟ್ಟುವಾಗಲೇ 120 ಕೆಜಿ ತೂಕ ಹೊಂದಿರುತ್ತದೆ.

2. ಮೂರು ಜಾತಿಯ ಆನೆಗಳಿವೆ

ಆಫ್ರಿಕನ್‌ ಹುಲ್ಲುಗಾವಲಿನ ಆನೆ (ಬುಷ್‌ ಆನೆ), ಆಫ್ರಿಕನ್ ಕಾಡಾನೆ ಹಾಗೂ ಏಷ್ಯಾನ್‌ ಆನೆ. ಏಷ್ಯಾನ್‌ ಆನೆಗಳು ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ, ಆಫ್ರಿಕನ್ ಆನೆಗಳಿಗೆ ಅದರ ಸೊಂಡಲಿನಲ್ಲಿ ಎರಡು ಬೆರಳುಗಳಿದ್ದರೆ, ಏಷ್ಯಾನ್‌ ಆನೆಗೆ ಒಂದು ಬೆರಳು ಇರುತ್ತದೆ.

3. ಆನೆಯ ಕೌಶಲ್ಯ ಇರುವುದು ಅದರ ಸೊಂಡಲಿನಲ್ಲಿ'

ಅದರ ಸೊಂಡಿಲಿನಲ್ಲಿ ಸುಮಾರು 150,000 ಸ್ನಾಯುಗಳಿರುತ್ತೆ, ಅಲ್ಲದೆ ಇದು ಆನೆಯ ತುಂಬಾ ಸೆನ್ಸೆಟಿವ್ ಆದ ಜಾಗ ಆಗಿದೆ. ಆನೆ ಸೊಂಡಿಲಿನಲ್ಲಿ ನೆಲಗಡಲೆ ಕಿತ್ತು ಅದರ ಸಿಪ್ಪೆ ಸುಲಿದು ಬರೀ ನೆಲಗಡಲೆಯಷ್ಟೇ ತಿನ್ನುವ ಚಾಕಚಕ್ಯತೆ ಹೊಂದಿದೆ. ಆನೆಗಳ ಸೊಂಡಿಲಿನಲ್ಲಿ 8 ಲೀಟರ್‌ ನೀರು ಹಿಡಿಯುತ್ತದೆ, ಇನ್ನು ಈಜುವಾಗಲೂ ಈ ಸೊಂಡಿಲು ಸಹಾಯ ಮಾಡುತ್ತೆ.

4. ಆನೆಯ ದಂತಗಳು ಅದರ ಹಲ್ಲುಗಳಾಗಿವೆ

ಆನೆಗಳು ಎರಡು ವರ್ಷ ಇರುವಾಗ ಅದರ ದಂತಗಳು ಬೆಳೆಯಲಾರಂಭಿಸುತ್ತದೆ, ದಂತಗಳು ಆನೆಯ ಪ್ರಮುಖ ಹಲ್ಲು ಆಗಿದೆ, ಈ ದಮತ ಬಳಸಿ ಮರಗಳನ್ನು ಸೀಳಿ ತಿನ್ನುತ್ತೆ, ಇನ್ನು ಹೋರಾಟ ಮಡುವಾಗಲೂ ಆನೆ ದಂತವನ್ನು ಬಳಸುತ್ತದೆ.

ಇನ್ನು ಈ ದಂತದಿಂದಲೇ ಇವುಗಳಿಗೆ ಪ್ರಾಣಾಪಯ ಕೂಡ ಅಧಿಕ. ಕಾಡುಗಳ್ಳಲು ಆನೆಯ ದಂತಕ್ಕಾಗಿ ಇವುಗಳನ್ನು ಭೇಟೆಯಾಡುತ್ತಾರೆ.

5. ಆನೆಗಳ ಚರ್ಮ ತುಂಬಾ ದಪ್ಪವಿರುತ್ತದೆ

ಆನೆಗಳಿಗೆ ಸನ್‌ಬರ್ನ್ ಆಗಲ್ಲ, 2.5 ಸೆ. ಮೀ ದಪ್ಪವಿದೆ ಅದರ ಚರ್ಮ, ಅಲ್ಲದೆ ಅವುಗಳು ಮಣ್ಣಿನಲ್ಲಿ ಹೊರಳಾಡಿ ಮಣ್ಣು ಮತ್ತಿಕೊಂಡಿರುವುದರಿಂದ ಬಿಸಿಲು ಎಷ್ಟೇ ಇದ್ದರು ಅದಕ್ಕೆ ಏನೂ ಆಗಲ್ಲ.

6. ಆನೆಗಳು ತಿನ್ನುತ್ತಲೇ ಇರುತ್ತವೆ ಆನೆಗಳು ಸೀಸನ್‌ಗೆ ತಕ್ಕಂತೆ ಆಹಾರಗಳನ್ನು ತಿನ್ನುತ್ತವೆ, ಹಣ್ಣುಗಳ ಸಮಯದಲ್ಲಿ ಹಣ್ಣುಗಳು, ಬಿದಿರು ಚಿಗುರು ಬರುವ ಸಮಯದಲ್ಲಿ ಅದದು, ಗಿಡಗಳ ತೊಗಟೆಗಳು ಎಲ್ಲಾ ತಿನ್ನುತ್ತಿರುತ್ತವೆ. ಒಂದು ಆನೆಗೆ ದಿನಕ್ಕೆ 150ಕೆಜಿಯಷ್ಟು ಆಹಾರ ಬೇಕಾಗುತ್ತೆ. ದಿನದಲ್ಲಿ ಮುಕ್ಕಾಲು ಭಾಗ ತಿನ್ನುತ್ತಲೇ ಕಾಲ ಕಳೆಯುತ್ತವೆ.
 
7. ಆನೆಗಳ ಸಂವಹನ ಆನೆಗಳು ಒಂದೊಂದು ಸಂದರ್ಭದಲ್ಲಿ ಒಂದೊಂದು ಸೌಂಡ್‌ ಹೊರಡಿಸುತ್ತದೆ, ಕೆಲವೊಮ್ಮೆ ಮೆಲ್ಲನೆ ಸೌಂಡ್ ಮಾಡಿದರೆ ಇನ್ನು ಕೆಲವೊಮ್ಮೆ ದೊಡ್ಡದಾಗಿ ಸೌಂಡ್‌ ಮಾಡುತ್ತವೆ, ವಾಸನೆ, ಟಚ್ ಇವುಗಳ ಮೂಲಕ ಸಂವಹನ ಮಾಡುತ್ತವೆ.


8. ಆನೆ ಮರಿಗಳು ಜನಿಸಿ ಕೆಲವೇ ನಿಮಿಷಗಳಲ್ಲಿ ಎದ್ದು ನಿಲ್ಲುತ್ತದೆ ಆನೆ ಮರಿ ಹುಟ್ಟಿ 20 ನಿಮಿಷದಲ್ಲಿ ಎದ್ದು ನಿಲ್ಲುತ್ತದೆ. ಅಲ್ಲದೆ ಅವುಗಳು ಆಹಾರವನ್ನು ಹುಡುಕಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಾ ಇರುತ್ತವೆ.

ಆನೆಗಳು ಮರೆಯುವುದೇ ಇಲ್ಲ ಆನೆಗಳಿಗೆ ನೆನಪಿನ ಶಕ್ತಿ ತುಂಬಾ ಅಧಿಕ, ಆದ್ದರಿಂದ ಅವುಗಳು ಆಹಾರ ಹುಡುಕಿಕೊಂಡುಸಾವಿರಾರು ಕಿಮೀ ಹೋಗಿದ್ದರೂ ಮತ್ತೆ ವಾಪಾಸ್ ಬರುತ್ತವೆ.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries