HEALTH TIPS

ಅಂದೂ ಇಂದೂ ರಾಷ್ಟ್ರ ಪ್ರಕಲ್ಪಕ್ಕೆ ಕೊಡುಗೆ: ತಿರಂಗಾ ಅಭಿಯಾನ ಬೆಂಬಲಿಸಿದ ಎಡನೀರು ಮಠಾಧೀಶರು: ಪರಂಪರೆಯನ್ನು ನೆನಪಿಸಿದ ಶ್ರೀಗಳ ನಡೆ


             ಬದಿಯಡ್ಕ: ರಾಷ್ಟ್ರದ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ಅಂಗವಾಗಿ ರಾಷ್ಟ್ರವ್ಯಾಪಿಯಾಗಿ ರಾಷ್ಟ್ರದ ಧ್ವಜ ಆಂದೋಲನ ವ್ಯಾಪಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಪ್ರಧಾನಮಂತ್ರಿಗಳ ಸೂಚನೆಯಂತೆ ಹೊಸ ಬದಲಾವಣೆಗಳು ಈ ಬಾರಿ ಮಾಡಲಾಗಿದ್ದು, ಎಲ್ಲರೂ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ನೀಡಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಲಲ್ಲಿ ಪ್ರೊಪೈಲ್ ಚಿತ್ರದಲ್ಲಿ ತಿರಂಗ ಎಲ್ಲೆಂದರಲ್ಲಿ ಮೆರೆಯುತ್ತಿದೆ.
              ಈ ಮಧ್ಯೆ ಕಾಸರಗೋಡಿನ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಮ್ ಪ್ರೊಫೈಲ್ ಭಾವಚಿತ್ರ ಬದಲಿಸಿ, ರಾಷ್ಟ್ರಧ್ವಜ ಮೂಡಿಸಿದ್ದಾರೆ. ಇದರಿಂದ ಸ್ಪೂತೀ ಪಡೆದ ನೂರಾರು ಭಕ್ತರೂ ಸಂತಸಹಂಚಿಕೊಂಡು ತಮ್ಮ ಪ್ರೊಫೈಲ್ ಗಳಲ್ಲೀ ತಿರಂಗವಾಗಿಸಲು ಮುಂದಾಗಿದ್ದಾರೆ.



                ಎಡನೀರು ಮಠವೂ ಭಾರತದ ಸಂವಿಧಾನವೂ:
  ಭಾರತದ ಸಂವಿಧಾನದೊಂದಿಗೆ ನಿಕಟ ಸಂಬಂಧ ಹೊಂದಿರುವ ಶ್ರೀಮದ್ ಎಡನೀರು ಮಠ ಭಾರತದ ಸಮಗ್ರ ರಾಷ್ಟ್ರೀಯತೆಯೊಂದಿಗೆ ಹಿಂದಿನಿಂದಲೇ ಸಂಪೂರ್ಣ ತೊಡಗಿಸಿಕೊಂಡ ವಿಶೇಷತೆಯುಳ್ಳ ಮಠ ಪರಂಪರೆ. ಈ ಹಿಂದಿನ ಯತಿಗಳಾದ ಶ್ರೀ ಕೇಶವಾನಂದ ಸ್ವಾಮೀಜಿಯವರ ಹೆಸರನ್ನು ಭಾರತೀಯ ಸಂವಿಧಾನವು ನೀಡಿರುವ ಮೂಲಭೂತ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಭಾರತದ ಕಾನೂನು ವ್ಯವಸ್ಥೆಯಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ. ಕೇಶವಾನಂದ ಭಾರತಿ ವಿರುದ್ಧ ಕೇರಳ ಸರ್ಕಾರ ಪ್ರಕರಣವು ಈಗಲೂ ಕಾನೂನು ವಿದ್ಯಾರ್ಥಿಗಳಿಗೆ ಕ್ಲಾಸಿಕ್ ಪ್ರಕರಣವಾಗಿ ಕಾರ್ಯನಿರ್ವಹಿಸುತ್ತದೆ.
          ಈ ಪ್ರಕರಣವನ್ನು 13 ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂ ಕೋರ್ಟ್‍ನ ಅತಿದೊಡ್ಡ ಪೀಠದೊಂದಿಗೆ ಭಾರತೀಯ ಇತಿಹಾಸದಲ್ಲಿ ಅಪರೂಪದ ಪ್ರಕರಣ ಎಂದು ಕರೆಯಲಾಗಿದೆ. ವಾದ-ಪ್ರತಿವಾದಗಳು 68 ದಿನಗಳ ಕಾಲ ನಡೆದವು. ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಹಕ್ಕು ಸಂಸತ್ತಿಗೆ ಇದೆ ಆದರೆ ಸಂವಿಧಾನದ ಮೂಲ ರಚನೆಗೆ ತಿದ್ದುಪಡಿ ಮಾಡಲು ಅವಕಾಶವಿಲ್ಲ ಎಂದು ತೀರ್ಪು ಹೇಳಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಯತಿಗಳಾಗಿರುವ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಪೂರ್ವಪರಂಪರೆಯ ಹೆಜ್ಜೆಯನ್ನನುಸರಿಸಿ ಮುಂದುವರಿಯುತ್ತಿದ್ದು, ತಮ್ಮ ಪ್ರೊಪೈಲ್ ಚಿತ್ರ ಬದಲಾಯಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿರುವುದು ವ್ಯಾಪಕ ಜನಮನ್ನಣೆಗೆ ಪಾತ್ರವಾಗಿ ವೈರಲ್ ಆಗುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries