ಕುಂಬಳೆ: ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮ ತರಗತಿಗೆ ಮತ್ತೆ ಮಲೆಯಾಳ ಶಿಕ್ಷಕನ ನೇಮಕವಾಗಿದ್ದು ಭಾರೀ ವಿರೋಧ ವ್ಯಕ್ತವಾಗಿದೆ. ಹೈಸ್ಕೂಲು ವಿಭಾಗದ ಫಿಸಿಕಲ್ ಸೈನ್ಸ್ ಕನ್ನಡ ಮಾಧ್ಯಮಕ್ಕೆ ಕನ್ನಡದ ಗಂಧಗಾಳಿ ಅರಿಯದ ತಿರುವನಂತಪುರದ ಮಲೆಯಾಳಿ ಶಿಕ್ಷಕನೋರ್ವನನ್ನು ನೇಮಕಗೊಳಿಸಿ ಆದೇಶಹೊರಡಿಸಲಾಗಿದೆ. ವಿದ್ಯಾಭ್ಯಾಸ ಇಲಾಖೆಯ ಈ ಅಕ್ರಮ ಖಮಡಿಸಿ ಶಾಲಾ ವಿದ್ಯಾರ್ಥಿಗಳು, ರಕ್ಷಕ ಶಿಕ್ಷಕ ಸಂಘ ಗುರುವಾರ ಭಾರೀ ಪ್ರತಿಭಟನೆ ನಡೆಸಿತು.
ಕಳೆದ ವರ್ಷವೂ ಇದೇ ಶಾಲೆಗೆ ಮಾರ್ಚ್ ತಿಂಗಳಲ್ಲಿ ಮಲೆಯಾಳಿ ಫಿಸಿಕಲ್ ಸೈನ್ಸ್ ಶಿಕ್ಷಕನನ್ನು ನೇಮಕಗೊಳಿಸಿದಾಗ ಪ್ರತಿಭಟನೆ ನಡೆಸಲಾಗಿತ್ತು. ಆ ಸಂದರ್ಭ ನೇಮಕಾತಿ ರದ್ದುಪಡಿಸಿ ತಾತ್ಕಾಲಿಕ ಪರಿಹಾರ ನೀಡಲಾಗಿತ್ತು. ಆದರೆ ಇದೀಗ ಮತ್ತೆ ಮಕ್ಕಳ ಭವಿಷ್ಯದೊಡನೆ ಚೆಲ್ಲಾಟವಾಡಲು ಮಲೆಯಾಳಿ ಶಿಕ್ಷಕನ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದ್ದು ವಿದ್ಯಾಭ್ಯಾಸ ಇಲಾಖೆಯ ಕ್ರಮವನ್ನು ಖಂಡಿಸಲಾಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ಕೊಟ್ಟುಡಲ್ ಪ್ರತಿಭಟನೆ ಉದ್ಘಾಟಿಸಿದರು. ಸತೀಶ್ ರೈ, ಚಂದ್ರಹಾಸ ಬಿಎಂ., ಶೀನ ಎಂ.ಆರ್, ರಘುನಾಥ ರೈ, ಯಶೋಧ, ಮಲ್ಲಿಕಾ ಬಾಡೂರು, ಶ್ರೀತ ಮಯಂಪಾಡಿ ಮೊದಲಾದವರು ಭಾಗವಹಿಸಿದ್ದರು. ಜಯ ಬಿ.ಎಂ.ಸ್ವಾಗತಿಇಸ, ವಂದಿಸಿದರು.
ಕನ್ನಡ ಮಾಧ್ಯಮಕ್ಕೆ ಮತ್ತೊಮ್ಮೆ ಮಲೆಯಾಳಿ ಶಿಕ್ಷಕನ ನೇಮಕಾತಿ: ಅಂಗಡಿಮೊಗರಲ್ಲಿ ವಿದ್ಯಾರ್ಥಿಗಳು, ಪಿಟಿಎಯಿಂದ ಖಂಡನೆ
0
ಆಗಸ್ಟ್ 25, 2022




.jpg)
