ಕಾಸರಗೋಡು: ಮನೆಯಂಗಳದ 20 ಅಡಿ ಆಳದ ಬಾವಿಯೊಂದು ಭಾರೀ ಸದ್ದಿನೊಂದಿಗೆ ಭೂಗರ್ಭಕ್ಕೆ ಕುಸಿದ ಘಟನೆ ನಡೆದಿದೆ. ಚಂದೇರ ನಿವಾಸಿ ಟಿ.ವಿ.ಕುಂಞÂ್ಞ ಅಮ್ಮದ್ ಅವರ ಮನೆಯಂಗಳದ ಬಾವಿ ಮನೆಯವರು ನೋಡುತ್ತಿದ್ದಂತೆಯೇ ಕುಸಿದು ಬಿದ್ದಿದೆ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಕುಟುಂಬಸ್ಥರು ಭಯಭೀತರಾಗಿದ್ದಾರೆ.
ಮನೆಯಂಗಳದಲ್ಲಿ ದೊಡ್ಡ ಶಬ್ದ ಕೇಳಿದ ಮನೆಯವರು ಹೊರಗೆ ಬಂದಾಗ ಬಾವಿ ಕೆಳಗೆ ಕುಸಿಯುತ್ತಿರುವುದು ಕಂಡು ದಿಙ್ಮೂಡರಾದರು. ಒಂದು ನಿಮಿಷದಲ್ಲಿ ಕಣ್ಣೆದುರೇ ಬಾವಿ ಸಂಪೂರ್ಣವಾಗಿ ಭೂಗತವಾಯಿತು. ಶಬ್ದ ಕೇಳಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಗಾಬರಿಗೊಂಡು ಓಡಿ ಬಂದರು. ಬಾವಿ ಕುಸಿಯುತ್ತಿರುವಂತೆ ನೀರಿನ ಮಟ್ಟ ಬಿದ್ದು ಏರಿಕೆಯಾಗಿರುವುದಾಗಿ ಮನೆಯವರು ತಿಳಿಸಿದ್ದಾರೆ.
ಬಾವಿಯಿಂದ 10 ಅಡಿ ದೂರದಲ್ಲಿ ಸಣ್ಣ ಹೊಂಡ ಕೂಡ ನಿರ್ಮಾಣವಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ತ್ರಿಕರಿಪುರ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದೆ. ಮನೆಯಲ್ಲಿನ ವಿಶೇಷ ಪರಿಸ್ಥಿತಿಯನ್ನು ಪರಿಗಣಿಸಿ, ಕುಟುಂಬ ಸದಸ್ಯರಿಗೆ ರಾತ್ರಿಯೇ ಹೊರಹೋಗುವಂತೆ ಸೂಚಿಸಲಾಯಿತು. ಇದರಿಂದ ತಾತ್ಕಾಲಿಕವಾಗಿ ಕುಟುಂಬ ಸ್ಥಳಾಂತರಗೊಂಡಿದೆ. ಇದೇ ವೇಳೆ ಸಹಾಯಕ ಠಾಣಾಧಿಕಾರಿ ಸಿ.ಭಾಸ್ಕರನ್ ಮಾತನಾಡಿ, ಮನೆಗೆ ಬೇರೆ ಯಾವುದೇ ತೊಂದರೆ ಆಗಿಲ್ಲ. ಈ ಮನೆಯಲ್ಲಿ ಕುಞÂ್ಞ ಅಹಮ್ಮದ್ ಅಲ್ಲದೆ ಅವರ ಸಹೋದರರನ್ನೊಳಗೊಂಡ ಒಟ್ಟು ಎರಡು ಕುಟುಂಬಗಳು ವಾಸವಾಗಿದ್ದವು.
40 ವರ್ಷಗಳಷ್ಟು ಹಳೆಯದಾದ ಬಾವಿಗೆ ಆರು ವರ್ಷಗಳ ಹಿಂದೆ ಮನೆ ನಿರ್ಮಿಸಿದಾಗ, ಸುತ್ತುಗೋಡೆ ನಿರ್ಮಿಸಲಾಗಿತ್ತು.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಧಾರಾಕಾರ ಮಳೆ ಸುರಿದಿತ್ತು. ಬುಧವಾರ ಮಳೆ ಇರಲಿಲ್ಲ. ಮಂಗಳವಾರ ಬೆಳಗ್ಗೆ ಸುರಿದ ಭಾರಿ ಮಳೆಗೆ ಚಂದೇರಾ ರೈಲು ನಿಲ್ದಾಣದ ನವೀಕರಣಗೊಂಡ ಪ್ಲಾಟ್‍ಫಾರ್ಮ್ ಕುಸಿದಿತ್ತು.
ಮನೆ ಮುಂದಿನ ಬಾವಿ ಭಾರೀ ಸದ್ದಿನೊಂದಿಗೆ ಕುಸಿತ: ಸಂಪೂರ್ಣ ಭೂಗರ್ಭ ಸೇರಿದ ಬಾವಿ!
0
ಆಗಸ್ಟ್ 25, 2022




.jpg)
