ಕಾಸರಗೋಡು: ಜಿಲ್ಲೆಯಲ್ಲಿ ರೈಲ್ವೆ ಹಳಿಗಳ ಮೇಲೆ ಕಲ್ಲುಗಳನ್ನಿರಿಸಿ ವಿದ್ವಂಸಕ ಕೃತ್ಯ ನಡೆಸಲು ಮತ್ತೆ ಸಂಚು ನಡೆಸಲಾಗಿದೆ. ಜಿಲ್ಲೆಯ ಕುಂಬಳೆ, ತೃಕ್ಕನ್ನಾಡ್ ಪ್ರದೇಶದ ರೈಲ್ವೆ ಹಳಿ ಮೇಲೆ ಕಲ್ಲು, ಕಾಂಕ್ರೀಟ್-ಕಬ್ಬಿಣ ಮಿಶ್ರಣದ ಭಾರದ ವಸ್ತು ಇರಿಸಿ ಹಾಗೂ ಹೊಸದುರ್ಗದಲ್ಲಿ ಸಂಚರಿಸುವ ರೈಲಿಗೆ ಕಲ್ಲು ತೂರಾಟ ನಡೆಸಿ ಬುಡಮೇಲು ಕೃತ್ಯಕ್ಕೆ ಸಂಚು ರೂಪಿಸಿಲಾಗಿದೆ,.
ಕೋಟಿಕುಳಂ-ಬೇಕಲ ಮಧ್ಯೆ ತೃಕ್ಕನ್ನಾಡ್ ತ್ರಯಂಬಕೇಶ್ವರ ದೇವಸ್ಥಾನ ಹಿಂಭಾಗದಲ್ಲಿ ಹಾದುಹೋಗುವ ಹಳಿ ಮೇಲೆ ಈ ಕಾಂಕ್ರೀಟ್ ಮಿಶ್ರಿತ ಕಲ್ಲು ಇರಿಸಿರುವುದನ್ನು ಈ ಹಾದಿಯಾಗಿ ಮಂಗಳೂರು-ಕೊಯಂಬತ್ತೂರು ರೈಲು ಹಾದುಹೋಗುವ ಅಲ್ಪ ಮೊದಲು ತೆರವುಗೊಳಿಸುವ ಮೂಲಕ ದುರಂತ ತಪ್ಪಿಸಲಾಗಿದೆ. ಈ ಬಗ್ಗೆ ಬೇಕಲ ಠಾಣೆ ಪೊಲೀಸರು ಕೇಸು ದಆಖಲಿಸಿಕೊಂಡಿದ್ದಾರೆ.
ಕುಂಬಳೆ ರಐಲ್ವೆ ನಿಲ್ದಾಣದಿಂದ ಸುಮಾರು 400ಮೀ. ದೂರದಲ್ಲಿ ರೈಲು ಹಳಿಯಲ್ಲಿ ಬೃಹತ್ ಗಾತ್ರದ ಕಲ್ಲು ಇರಿಸಲಾಗಿದ್ದು, ನಾಗರಿಕರು ಈ ಬಗ್ಗೆ ರೈಲ್ವೆ ಸಿಬ್ಬಂದಿಗೆ ನೀಖಡಿದ ಮಾಹಿತಿಯನ್ವಯ ತೆರವುಗೊಳಿಸಲಾಗಿತ್ತು. ರೈಲ್ವೆ ಸೆಕ್ಷನ್ ಅಧಿಕಾರಿ ರಂಜಿತ್ ಕುಮಾರ್ ಅವರ ದೂರಿನ ಮೇರೆಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಳಿಸಿಕೊಂಡಿದ್ದಾರೆ. ಹೊಸದುರ್ಗದಲ್ಲಿ ಸಂಚರಿಸುತ್ತಿದ್ದ ರೈಲಿಗೆ ಕಲ್ಲೆಸೆಯಲಾಗಿದ್ದು, ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ತೃಕ್ಕನ್ನಾಡು ಪ್ರದೇಶದಲ್ಲಿರುವ ಎರಡು ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಲಾಗುತ್ತಿದ್ದು, ಮೂರೂ ಕೃತ್ಯಗಳನ್ನು ರೈಲ್ವೆ ಭದ್ರತಾ ಪಡೆ(ಆರ್‍ಪಿಎಫ್), ರೈಲ್ವೆ ಪೊಲೀಸ್ ಹಾಗೂ ಸ್ಥಳೀಯ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಆರಂಭಿಸಿದ್ದಾರೆ. ಇದರ ಜತೆಗೆ ಕೇಂದ್ರ ಗುಪ್ತಚರ ವಿಭಾಗವೂ ತನಿಖೆ ಕೈಗೆತ್ತಿಕೊಂಡಿದೆ. ಆರ್‍ಪಿಎಫ್ ಉಪ ಆಯುಕ್ತರು ಕಾಸರಗೋಡಿಗೆ ಭೇಟಿ ನೀಡಿ, ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅವಳಿ ಜಿಲ್ಲೆಗಳಲ್ಲಿ ಸಂಚರಿಸುತ್ತಿರುವ ರೈಲುಗಳಿಗೆ ಕಲ್ಲೆಸೆತ, ರೈಲ್ವೆ ಹಳಿಯಲ್ಲಿ ಕಲ್ಲು, ಕಬ್ಬಿಣದ ರಾಡ್, ಕಾಂಕ್ರೀಟ್-ಸಿಮೆಂಟ್ ಮಿಶ್ರಿತ ಕಲ್ಲುಗಳನ್ನಿರಿಸಿ ವಿಧ್ವಂಸಕ ಕೃತ್ಯಗಳಿಗೆ ಪ್ರಯತ್ನ ನಿರಂತರ ನಡೆದುಬರುತ್ತಿದ್ದರೂ, ಆರೋಪಿಗಳ ಪತ್ತೆ ಇದುವರೆಗೆ ಸಾಧ್ಯವಾಗದಿರುವುದು ಕಿಡಿಗೇಡಿ ಕೃತ್ಯ ಮರುಕಳಿಸಲು ಕಾರಣವಾಗುತ್ತಿರುವುದಾಗಿ ನಾಗರಿಕರು ದೂರಿದ್ದಾರೆ.
ರೈಲುಹಳಿಗಳ ಮೇಲೆ ಕಲ್ಲುಗಳನ್ನಿರಿಸಿ ವಿಧ್ವಂಸಕ ಕೃತ್ಯಕ್ಕೆ ಸಂಚು-ಗುಪ್ತಚರ ವಿಭಾಗದಿಂದಲೂ ತನಿಖೆ
0
ಆಗಸ್ಟ್ 23, 2022
Tags


