ಪೆರ್ಲ: ಶ್ರೀ ಸತ್ಯನಾರಾಯಣ ಪ್ರೌಢಶಾಲಾ ರಕ್ಷಕ-ಶಿಕ್ಷಕ ಸಂಘ ಸಭೆ ಶಾಲಾ ಗ್ರಂಥಾಲಯ ಸಭಾಂಗಣದಲ್ಲಿ ಜರುಗಿತು. ಪಿಟಿಎ ಅಧ್ಯಕ್ಷ ಅನಂತೇಶ್ವರ ಪೈ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಬಿ. ಲೆಕ್ಕಪತ್ರ ಮಂಡಿಸಿ ಸಂಘದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆ ಹಾಗೂ ಇದರಿಂದ ವಿದ್ಯಾರ್ಥಿಗಳಲ್ಲಿ ಉಂಟಾಗುತ್ತಿರುವ ಮಾನಸಿಕ ಬದಲಾವಣೆ ಬಗ್ಗೆ ಸ್ಲೈಡ್‍ಶೋ ಮೂಲಕ ಶಿಕ್ಷಕ ಕೃಷ್ಣಪ್ರಸಾದ್ ಮಾಹಿತಿ ನೀಡಿದರು. ಈಗಾಗಲೇ ಆಫ್‍ಲೈನ್ ತರಗತಿಗಳು ಆರಂಭಗೊಂಡಿರುವುದರಿಂದ ತುರ್ತು ಪ್ರಕಟಣೆಗಳ ಹೊರತಾಗಿ ಪಠ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮೊಬೈಲ್ ಮೂಲಕ ನೀಡಲಾಗುತ್ತಿಲ್ಲ. ವಿದ್ಯಾರ್ಥಿಗಳು ತರಗತಿ ವಿಚಾರಕ್ಕೆ ಸಂಬಂಧಿಸಿ ಮೊಬೈಲನ್ನು ಆಶ್ರಯಿಸಬೇಕಾಗಿಲ್ಲ ಎಂದು ತಿಳಿಸಿದರು. ಶಿಕ್ಷಕರಾದ ಎನ್. ಕೇಶವ ಪ್ರಕಾಶ್, ಸತ್ಯನಾರಾಯಣ ಪುಣಿಂಚಿತ್ತಾಯ ಉಪಸ್ಥಿತರಿದ್ದರು.
ಈ ಸಂದರ್ಭ 2022-23ನೇ ಸಾಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಪುರುಷೋತ್ತಮ ಬಿ.ಎಂ, ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕ ಬಿ.ರಾಜೇಂದ್ರ,ಸದಸ್ಯರಾಗಿ ವಿನೋದ್ ಪೆರ್ಲ, ಸುಬ್ರಹ್ಮಣ್ಯ ಭಟ್, ಅನಂತೇಶ್ವರ ಪೈ, ವೆಂಕಟ್ರಮಣ ಆಚಾರ್ಯ, ಸುಜಾತಾ, ಅರುಣಾ, ಶಿಕ್ಷಕ ಎನ್. ಕೇಶವ ಪ್ರಕಾಶ್, ಮದರ್ ಪಿಟಿಎ ಅಧ್ಯಕ್ಷರಾಗಿ ಸೌಮ್ಯಾ, ಎಸ್.ಸಿ-ಎಸ್.ಟಿ ಪ್ರತಿನಿಧಿಗಳಾಗಿ ಶಾಂತಾ ಕೆ ಹಾಗೂ ಮೋಹನ ಸೂರ್ಡೆಲು ಅವರನ್ನು ಆಯ್ಕೆ ಮಾಡಲಾಯಿತು.
ಶಾಲಾ ರಕ್ಷಕ-ಶಿಕ್ಷಕ ಸಂಘ ಸಭೆ, ಮೊಬೈಲ್ ಬಳಕೆ ಬಗ್ಗೆ ಮಾಹಿತಿ
0
ಆಗಸ್ಟ್ 25, 2022
Tags




