HEALTH TIPS

ಶರಿಮಲೆಯಲ್ಲಿ ಸಿಂಹಮಾಸದ ಪೂಜೆ ಆರಂಭ: ವಿಎನ್ ಶ್ರೀಕಾಂತ್ ಹೊಸ ಕೀರ್ ಶಾಂತಿಯಾಗಿ ಆಯ್ಕೆ


              ಪತ್ತನಂತಿಟ್ಟ: ಶಬರಿಮಲೆ ಶ್ರೀಧರ್ಮಶಾಸ್ತ ಕ್ಷೇತ್ರ ಸಿಂಹಮಾಸದ ಪೂಜೆಗಾಗಿ ತೆರೆಯಲಾಗಿದೆ. ಬುಧವಾರ ಬೆಳಗ್ಗೆ 5 ಗಂಟೆಗೆ ಮೇಲ್ಶಾಂತಿ ಎನ್. ಪರಮೇಶ್ವರನ್ ನಂಬೂದಿರಿ ದೇವಸ್ಥಾನದ ಗರ್ಭಗೃಹದ ಬಾಗಿಲು ತೆರೆದು ದೀಪ ಬೆಳಗಿಸಿದರು. ನಂತರ ನಿರ್ಮಾಲ್ಯ ದರ್ಶನ ಹಾಗೂ ಅಭಿμÉೀಕ ನಡೆಯಿತು.
          ಚಿನ್ನದ ಕುಂಡದಲ್ಲಿ ತುಪ್ಪದ ಅಭಿμÉೀಕದ ನಂತರ ತಂತ್ರಿ ಕಂಠರರ್  ರಾಜೀವರ್ ಅವರು ಭಕ್ತರಿಗೆ ಅಭಿμÉೀಕತೀರ್ಥ ಹಾಗೂ ಪ್ರಸಾದ ನೀಡಿದರು. ನಂತರ ಮಂಟಪದಲ್ಲಿ ಮಹಾ ಗಣಪತಿ ಹೋಮ ನಡೆದು ಶಬರಿಮಲೆ ನೂತನ ಕಿರ್ ಶಾಂತಿ ನೇಮಕಕ್ಕೆ ಚೀಟಿ ಎತ್ತುವ ಕಾರ್ಯಕ್ರಮ ನಡೆಯಿತು.
           ವಿ.ಎನ್.ಶ್ರೀಕಾಂತ್ ಅವರು ಶಬರಿಮಲೆಯ ನೂತನ ಕೀರ್ ಶಾಂತಿ(ಸಹಾಯಕ ಅರ್ಚಕ) ಆಗಿ ನೇಮಕವಾಗಿದ್ದಾರೆ.ದೇವಸ್ವಂ ಕಮಿಷನರ್ ಬಿ.ಎಸ್.ಪ್ರಕಾಶ್ ಅವರ ಉಸ್ತುವಾರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅಲ್ಲದೆ ಸಿಂಹ ಮಾಸದ ಪ್ರಥಮ ದಿನದ  ಅಂಗವಾಗಿ ಶಬರಿಮಲೆಯಲ್ಲಿ ಲಕ್ಷಾರ್ಚನೆ ನಡೆಯಿತು. ಹೊಸ ವರ್ಷದಲ್ಲಿ ಅಯ್ಯಪ್ಪನ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು.
      ಶ್ರೀಕ್ಷೇತ್ರದಲ್ಲಿ ಮುಂದಿನ  ಐದು ದಿನವೂ ಉದಯಾಸ್ತಮಾನ ಪೂಜೆ, ಕಲಶಾಭಿμÉೀಕ, ಅμÁ್ಟಭಿμÉೀಕ, ಪಡಿಪೂಜೆ, ಪುμÁ್ಪಭಿμÉೀಕ, ಕಳಭಾಭಿμÉೀಕ ನಡೆಯಲಿದೆ. 21ರಂದು ರಾತ್ರಿ 10 ಗಂಟೆಗೆ ಹರಿವರಾಸನಂ ಹಾಡುವ ಮೂಲಕ ಪೂಜೆಗಳು ಮುಕ್ತಾಯಗೊಂಡು ಗರ್ಭಗೃಹದ ಬಾಗಿಲು ಮುಚ್ಚಲಾಗುವುದು. ಓಣಂ ದಿನದ ಪೂಜೆಗಳಿಗಾಗಿ ಸೆ.6ರಂದು ಮತ್ತೆ ಗರ್ಭಗೃಹ  ತೆರೆಯಲಾಗುವುದು.ಸೆ.10ರಂದು ಗರ್ಭಗೃಹ ಮುಚ್ಚಲಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries