ಕುಂಬಳೆ: ತುಳು ಲಿಪಿ ಸಂಶೋಧಕ, ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷ, ತುಳು ರತ್ನ, ಖ್ಯಾತ ವಿದ್ವಾಂಸ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಅವರ ಜಯಂತಿ ಅ.10 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸುಪ್ರಸಿದ್ಧ ದೇವಸ್ಥಾನ ಅನಂತಪುರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಕಾರ್ಯಕ್ರಮವನ್ನು ಯಶಸ್ಸುಗೊಳಿಸಲು ಪುಣಿಂಚಿತ್ತಾಯರ ಅಭಿಮಾನಿಗಳು ಸೇರಿದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು. ಪುಣಿಂಚಿತ್ತಾಯ ಕುರಿತು ವಿಚಾರಗೋಷ್ಠಿ, ಕವಿತಾ ವಾಚನ, ವಿಚಾರ ಮಂಥನ, ಪು.ವೆಂ.ಪು. ಪ್ರಶಸ್ತಿ, ಪದರಂಗಿ ಎಂಬ ರಸ ಮಂಜರಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು. ತುಳು ವಲ್ರ್ಡ್ ಹಾಗು ವಿವಿಧ ಸಂಘಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಸಲಾಗುವುದು.
ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಡಾ.ಶ್ರೀನಿಧಿ ಸರಳಾಯ ವಹಿಸಿ ಹಲವು ವಿಚಾರಗಳನ್ನು ಮಂಡಿಸಿದರು. ತುಳು ವಲ್ರ್ಡ್‍ನ ಡಾ.ರಾಜೇಶ್ ಆಳ್ವ ಕಾರ್ಯಕ್ರಮ ವಿವರಗಳನ್ನು ತಿಳಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ನ್ಯಾಯವಾದಿ ಥೋಮಸ್ ಡಿಸೋಜಾ, ಶ್ರೀನಿವಾಸ ಆಳ್ವ ಕಳತ್ತೂರು, ಬಿ.ಪಿ.ಶೇಣಿ, ಪ್ರೊ.ಎ.ಶ್ರೀನಾಥ್, ವಿಶಾಲಾಕ್ಷ ಪುತ್ರಕಳ, ಶ್ರೀಕೃಷ್ಣಯ್ಯ ಅನಂತಪುರ, ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ, ರವಿ ನಾಯ್ಕಾಪು, ಶಂಕರ ಸ್ವಾಮಿಕೃಪಾ, ಜಯಂತ ಪಾಟಾಳಿ, ಪ್ರಭಾವತಿ ಕೆದಿಲಾಯ, ವಿಜಯರಾಜ್ ಪುಣಿಂಚಿತ್ತಾಯ, ಜ್ಯೋತ್ಸ್ನಾ ಕಡಂದೇಲು, ವಾಣಿ ಪಿ.ಎಸ್, ಸುಶೀಲಾ ಕೆ.ಪದ್ಯಾಣ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಗಳ ಕುರಿತು ಚರ್ಚಿಸಿದರು. ಭಾಸ್ಕರ ಕಾಸರಗೋಡು ಸ್ವಾಗತಿಸಿ, ನಿರೂಪಿಸಿದರು.
ಅ.10 : ಅನಂತಪುರದಲ್ಲಿ ಪು.ವೆಂ.ಪು. ಜಯಂತಿ ಹಾಗು ತುಳು ಲಿಪಿ ದಿನಾಚರಣೆ
0
ಸೆಪ್ಟೆಂಬರ್ 15, 2022
Tags




