HEALTH TIPS

ತಪ್ಪು ಮಾಹಿತಿ: ₹15,000 ಪರಿಹಾರ ನೀಡಲು ಪ್ರಯೋಗಾಲಯಕ್ಕೆ ಸೂಚನೆ

 

             ಠಾಣೆ : ಪ್ರಯೋಗಾಲಯವೊಂದು ಕೋವಿಡ್‌-19 ಪರೀಕ್ಷಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನಮೂದಿಸಿದ್ದಕ್ಕಾಗಿ ವ್ಯಕ್ತಿಯೊಬ್ಬರ ವಿಮಾನ ಪ್ರಯಾಣ ರದ್ದಾಗಿತ್ತು. ಆ ವ್ಯಕ್ತಿಗೆ ₹ 15,000 ಪರಿಹಾರ ನೀಡುವಂತೆ ಪ್ರಯೋಗಾಲಯಕ್ಕೆ ಠಾಣೆ ಜಿಲ್ಲಾ ಗ್ರಾಹಕರ ದೂರು ಪರಿಹಾರ ಆಯೋಗ(ಟಿಡಿಸಿಸಿಆರ್‌ಸಿ) ನಿರ್ದೇಶಿಸಿದೆ.

               ವ್ಯಕ್ತಿ ಕುಟುಂಬದ ಜೊತೆ 2020ರ ಡಿಸೆಂಬರ್‌ 2ರಂದು ದುಬೈಗೆ ಹೊರಟಿದ್ದರು. ಆ ಸಮಯದ ಕೋವಿಡ್‌ ನಿಯಮದ ಪ್ರಕಾರ ಪ್ರಯಾಣದ 72 ಗಂಟೆಗಳ ಒಳಗೆ ಮಾಡಿಸಲಾಗಿರುವ ಕೋವಿಡ್‌-19 ಪರೀಕ್ಷೆಯ ಪ್ರಮಾಣಪತ್ರವನ್ನು ವಿಮಾನ ನಿಲ್ದಾಣದಲ್ಲಿ ಒದಗಿಸಬೇಕಿತ್ತು. ವ್ಯಕ್ತಿಯ ಪತ್ನಿ ಮತ್ತು ಮಗುವಿನ ಕೋವಿಡ್‌ ಪ್ರಮಾಣಪತ್ರದಲ್ಲಿ ಪರೀಕ್ಷಾ ದಿನಾಂಕವನ್ನು ನವೆಂಬರ್‌ 29 ಎಂದು ಮತ್ತು ವ್ಯಕ್ತಿಯ ಪ್ರಮಾಣಪತ್ರದಲ್ಲಿ ಪರೀಕ್ಷಾ ದಿನಾಂಕವನ್ನು ನವೆಂಬರ್‌ 28 ಎಂದು ನಮೂದಿಸಲಾಗಿತ್ತು. ಈ ತಪ್ಪಿನಿಂದಾಗಿ ವ್ಯಕ್ತಿಯ ಪ್ರಯಾಣ ರದ್ದಾಗಿತ್ತು. ತಮಗೆ ಪರಿಹಾರ ದೊರಕಿಸಬೇಕೆಂದು ಕೋರಿ ಅವರು ಟಿಡಿಸಿಸಿಆರ್‌ಸಿನಲ್ಲಿ ದೂರು ಸಲ್ಲಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries