ಕಾಸರಗೋಡು: ಸಾರ್ವಜನಿಕ ಶಿಕ್ಷಣ ಇಲಾಖೆಯು ವಯಸ್ಕರ ಉನ್ನತ ಮಾಧ್ಯಮಿಕ ಸಮತ್ವ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಶೇ.85ರಷ್ಟು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಾಕ್ಷರತಾ ಮಿಷನ್ ಮೂಲಕ ಆಗಸ್ಟ್ 13ರಿಂದ 20ರವರೆಗೆ ನಡೆದ ಪರೀಕ್ಷೆಗೆ ಜಿಲ್ಲೆಯ ಒಂಬತ್ತು ಹೈಯರ್ ಸೆಕೆಂಡರಿ ಶಾಲೆಗಳಿಂದ 404 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 348 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಮಲಯಾಳ ವಿಭಾಗದಲ್ಲಿ 302ರಲ್ಲಿ 259 ಮಂದಿ ಹಾಗೂ ಕನ್ನಡ ವಿಭಾಗದಲ್ಲಿ 102ರಲ್ಲಿ 89 ಮಂದಿ ಉತ್ತೀರ್ಣರಾಗಿದ್ದಾರೆ. ಕೆ.ಶೋಭನಾ ಕುಮಾರಿ (ಜಿಎಚ್‍ಎಸ್‍ಎಸ್ ಕಾಸರಗೋಡು), ಎಂಎಸ್ ಸುಮಯ್ಯ (ಜಿಎಚ್‍ಎಸ್‍ಎಸ್ ಹೊಸದುರ್ಗ) ಮತ್ತು ಕೆ.ನಾಸಿಲಾ ನಿಜಾಮ್ (ಜಿಎಚ್‍ಎಸ್‍ಎಸ್ ತ್ರಿಕರಿಪುರ) ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರತಿ ಭಾನುವಾರ ತರಗತಿ ನಡೆಸಲಾಗಿದ್ದು, ಆರು ತಿಂಗಳು ಆನ್‍ಲೈನ್ ತರಗತಿ ಮತ್ತು ಆರು ತಿಂಗಳ ಕಾಲ ಸಾಮಾನ್ಯ ತರಗತಿ ನಡೆಸಲಾಗಿತ್ತು. ಪದವಿ ಸೇರಿದಂತೆ ಯಶಸ್ವಿ ಕೋರ್ಸ್‍ಗಳಿಗೆ ಸೇರ್ಪಡೆಗೊಳ್ಳಲು ಇದು ಸಹಕಾರಿಯಾಗಲಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮತ್ತು ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಪಿ.ಎನ್.ಬಾಬು ವಿಜೇತರನ್ನು ಸನ್ಮಾನಿಸಿದರು.
ಹೈಯರ್ ಸೆಕೆಂಡರಿ ಸಮತ್ವ ಶಿಕ್ಷಣ: ಜಿಲ್ಲೆಯಲ್ಲಿ ಶೇ.85ರಷ್ಟು ಯಶಸ್ಸು
0
ಸೆಪ್ಟೆಂಬರ್ 27, 2022

