ಕುಂಬಳೆ: ನಾಯ್ಕಾಪು ಸಮೀಪದ ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ಸನ್ನಿಧಿಯಲ್ಲಿ ಸೋಮವಾರ ಗಣಹೋಮದೊಂದಿಗೆ ನವರಾತ್ರಿ ಉತ್ಸವ ಆರಂಭಗೊಂಡಿತು. ನೂತನವಾಗಿ ನಿರ್ಮಿಸಲ್ಪಟ್ಟ ದೇವಾಲಯದ ಶಾಶ್ವತ ಚಪ್ಪರವನ್ನು ಮುಂಬಯಿಯ ಉದ್ಯಮಿ, ಧಾರ್ಮಿಕ ಮುಂದಾಳು ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಿದರು.
ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಕಣಿಪುರ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಘುನಾಥ ಪೈ, ಶಿವರಾಮ ಭಟ್ ಹಳೆಮನೆ, ಚಂದ್ರಹಾಸ ಶೆಟ್ಟಿ, ಶ್ರೀಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ರವಿನಾಥ ರೈ ಕುಳ, ಉದ್ಯಮಿ ಕೆ.ಪಿ.ರೈ ಮೊದಲಾದವರು ಉಪಸ್ಥಿತರಿದ್ದರು. ಮಂಜುನಾಥ ಆಳ್ವ ಮಡ್ವ ಸ್ವಾಗತಿಸಿ, ಎಸ್.ಎಸ್.ರಾವ್ ಮುನ್ನಿಪ್ಪಾಡಿ ವಂದಿಸಿದರು.
ನವರಾತ್ರಿ ಪ್ರಯುಕ್ತ ಶ್ರೀರಾಜರಾಜೇಶ್ವರಿ ದೇವಿಗೆ ವಿಶೆಷ ಪೂಜೆ, ಅರ್ಚನೆಗಳು ನಡೆಯಿತು.

.jpg)
.jpg)
