ಕಾಸರಗೋಡು: ಸೀಸನ್ ಟಿಕೆಟ್ ಹೊಂದಿದ್ದು, ರಿಸರ್ವೇನ್ ಕೋಚಿನಲ್ಲಿ ಸಂಚರಿಸುತ್ತಿರುವುದನ್ನು ಪ್ರಶ್ನಿಸಿದ ರೈಲ್ವೆ ಟಿ.ಟಿಗೆ ಮೂವರು ಅಧ್ಯಾಪಕರು ಥಳಿಸಿದ ಘಟನೆ ನಡೆದಿದೆ. ಮಂಗಳೂರಿನಿಂದ ತಿರುವನಂತಪುರ ಸಂಚರಿಸುವ ಮಾವೇಲಿ ಎಕ್ಸ್‍ಪ್ರೆಸ್ ರೈಲಲ್ಲಿ ಮಂಗಳವಾರ ಘಟನೆ ನಡೆದಿದೆ. ಶಿಕ್ಷಕರ ಹಲ್ಲೆಯಿಂದ ರೈಲ್ವೆ ಟಿ.ಟಿ ಶೈಜು ಇ.ಎಂ ಗಾಗೊಂಡಿದ್ದು, ಇವರನ್ನು ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಸುರಕ್ಷಾ ಪಡೆ ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡಿನಿಂದ ರೈಲನ್ನೇರಿದ್ದ ಮೂವರು ಶಿಕ್ಷಕರು ರಿಸರ್ವೇಶನ್ ಕೋಚಿನಲ್ಲಿ ಸಂಚರಿಸುತ್ತಿರುವುದನ್ನು ಟಿ.ಟಿ ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡ ಅಧ್ಯಾಪಕರು ಟಿ.ಟಿ ಶೈಜು ಅವರ ಮೇಲೆ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಹಲ್ಲೆ ನಡೆಸಿದ ಮೂವರೂ ಶಿಕ್ಷಕರು ನಂತರ ನೀಲೇಶ್ವರ ನಿಲ್ದಾಣದಲ್ಲಿ ರೈಲಿನಿಂದ ಇಳಿದು ಪರಾರಿಯಾಗಿದ್ದಾರೆ. ಇವರಲ್ಲಿ ಒಬ್ಬ ಶಿಕ್ಷಕನ ಗುರುತಿನ ಚೀಟಿ ಲಭಿಸಿದ್ದು, ಇದರ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೀಸನ್ ಟಿಕೆಟ್ ಪಡೆದು ರಿಸರ್ವೇಶನ್ ಕೋಚಿನಲ್ಲಿ ಪ್ರಯಾಣ-ಪ್ರಶ್ನಿಸಿದ ಟಿಟಿಗೆ ಮೂವರು ಶಿಕ್ಷಕರಿಂದ ಹಲ್ಲೆ
0
ಸೆಪ್ಟೆಂಬರ್ 21, 2022



