ಪೆರ್ಲ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕೆಲಸ ಕಡಿತಗೊಳಿಸಿ ಯೋಜನೆಯನ್ನು ರದ್ಧುಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಉದ್ಯೋಗ ಖಾತರಿ ಕಾರ್ಮಿಕರ ನೇತೃತ್ವದಲ್ಲಿ ಪಂಚಾಯತಿ ಜನಪ್ರತಿನಿಧಿ ಹಾಗೂ ಸರ್ವಪಕ್ಷದ ಸಹಭಾಗಿತ್ವದಲ್ಲಿ ಜನಪರ ಪ್ರತಿಭಟನಾ ಧರಣಿ ಪೆರ್ಲ ಪೇಟೆಯಲ್ಲಿ ಜರಗಿತು. ಗ್ರಾಮ ಪಂಚಾಯತಿ ಕಚೇರಿಯ ಸಮೀಪದಿಂದ ಮೆರವಣಿಗೆಯೊಂದಿಗೆ ಪೆರ್ಲ ಪೇಟೆಯಲ್ಲಿ ಸಾಗಿ ಪ್ರತಿಭಟನೆ ನಡೆಸಲಾಯಿತು. ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಪ್ರತಿಭಟನೆ ಉದ್ಘಾಟಿಸಿದರು.
ಗ್ರಾಮ ಪಂ. ಉಪಾಧ್ಯಕ್ಷೆ ಡಾ.ಝಹನಾಸ್ ಹಂಸಾರ್ ಅಧ್ಯಕ್ಷತೆ ವಹಿಸಿದ್ದರು.
ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಕ್ಷೇಮ ಕಾರ್ಯಸ್ಥಾಯಿ ಸಮಿತಿ ಆಧ್ಯಕ್ಷೆ ಸೌದಾಭಿ ಹನೀಫ್, ಶಿಕ್ಷಣ ಸ್ಥಾಯಿ ಸಮಿತಿ ಆಧ್ಯಕ್ಷೆ ಜಯಶ್ರೀ ಎ. ಕುಲಾಲ್, ಪಂ.ಸದಸ್ಯರಾದ ರಾಧಾಕೃಷ್ಣ ನಾಯಕ್ ಶೇಣಿ, ನರಸಿಂಹ ಪೂಜಾರಿ, ರಾಮಚಂದ್ರ ಎಂ., ಶಶಿಧರ್ ಕಾಟುಕುಕ್ಕೆ, ಕುಸುಮಾವತಿ, ಸಾಮಾಜಿಕ ಮುಂದಾಳು ರವೀಂದ್ರನಾಥ ನಾಯಕ್ ಶೇಣಿ, ವಿನೋದ್ ಪೆರ್ಲ, ಆಯಿμÁ ಎ.ಎ.ಪೆರ್ಲ ಮೊದಲಾದವರು ಪಾಲ್ಗೊಂಡಿದ್ದರು. ಬಳಿಕ ಕಾರ್ಮಿಕರ ಸಹಿ ಸಂಗ್ರಹಣೆ ನಡೆಸಿ ಯೋಜನೆಯನ್ನು ಸಮರ್ಪಕಗೊಳಿಸುವಂತೆ ಒತ್ತಾಯಿಸಲಾಯಿತು.
ಪೆರ್ಲ ಪೇಟೆಯಲ್ಲಿ ಎಣ್ಮಕಜೆ ಗ್ರಾ.ಪಂ.ಉದ್ಯೋಗ ಖಾತರಿ ಕಾರ್ಮಿಕರಿಂದ ಪ್ರತಿಭಟನಾ ಧರಣಿ
0
ಸೆಪ್ಟೆಂಬರ್ 21, 2022




.jpg)
