HEALTH TIPS

ತಾಪಮಾನ ಏರಿಕೆ ಭಾರತದಲ್ಲಿ ಆಗಾಗ್ಗೆ ದೀರ್ಘಕಾಲೀನ ಬರಗಳಿಗೆ ಕಾರಣವಾಗಬಹುದು: ಅಧ್ಯಯನ ವರದಿ

              ವದೆಹಲಿ: ಹೆಚ್ಚುತ್ತಿರುವ ಜಾಗತಿಕ ತಾಪಮಾನವು ಭಾರತದಲ್ಲಿ ಆಗಾಗ್ಗೆ ದೀರ್ಘಕಾಲೀನ ಬರಗಳಿಗೆ ಕಾರಣವಾಗಬಹುದು ಮತ್ತು ಜಗತ್ತಿನಾದ್ಯಂತ ಜನರಿಗೆ ಹಾಗೂ ಪರಿಸರ ವ್ಯವಸ್ಥೆಗಳಿಗೆ ಗಂಭೀರ ಅಪಾಯಗಳನ್ನು ಒಡ್ಡುತ್ತದೆ ಎಂದು ಬ್ರಿಟನ್‌ನ ಯುನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ (ಯುಇಎ) ನಡೆಸಿರುವ ಅಧ್ಯಯನವು ತಿಳಿಸಿದೆ.

               ತಾಪಮಾನದಲ್ಲಿ 1.5 ಡಿಗ್ರಿ ಸೆಲ್ಶಿಯಸ್‌ನ ಸಾಧಾರಣ ಏರಿಕೆಯೂ ಭಾರತ, ಚೀನಾ, ಇಥಿಯೋಪಿಯಾ, ಘಾನಾ, ಬ್ರೆಝಿಲ್ ಮತ್ತು ಈಜಿಪ್ತ್‌ಗಳಲ್ಲಿ ಗಂಭೀರ ಪರಿಣಾಮಗಳನ್ನುಂಟು ಮಾಡಲಿದೆ ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.

               'ಕ್ಲೈಮೆಟಿಕ್ ಚೇಂಜ್' ಜರ್ನಲ್‌ನಲ್ಲಿ ಇತ್ತೀಚಿಗೆ ಪ್ರಕಟಗೊಂಡಿರುವ ವರದಿಯು ಆರು ದೇಶಗಳಲ್ಲಿ ತೀವ್ರ ಬರಗಾಲದ ಸಂಭವನೀಯತೆ ಮತ್ತು ಅವಧಿಯ ಮೇಲೆ ಜಾಗತಿಕ ತಾಪಮಾನದ ಪರ್ಯಾಯ ಮಟ್ಟಗಳ ಅಂದಾಜು ಪರಿಣಾಮಗಳನ್ನು ಪ್ರಮಾಣೀಕರಿಸಿದೆ.

               ತಾಪಮಾನದಲ್ಲಿ ಮೂರು ಡಿ.ಸೆ.ಏರಿಕೆಯಿಂದಾಗಿ ಪ್ರತಿ ದೇಶದ ಶೇ.50ಕ್ಕೂ ಅಧಿಕ ಕೃಷಿ ಪ್ರದೇಶವು 30 ವರ್ಷಗಳ ಅವಧಿಯಲ್ಲಿ ಒಂದು ವರ್ಷಕ್ಕೂ ಹೆಚ್ಚಿನ ತೀವ್ರ ಬರಗಾಲಗಳಿಗೆ ತುತ್ತಾಗುತ್ತದೆ ಎಂದು ಮುನ್ನಂದಾಜಿಸಲಾಗಿದೆ ಎಂದು ಯುಇಎಯಲ್ಲಿ ಜೀವವೈವಿಧ್ಯತೆ ಮತ್ತು ಹವಾಮಾನ ಬದಲಾವಣೆಯ ಸಹಾಯಕ ಪ್ರೊಫೆಸರ್ ಆಗಿರುವ ಜೆಫ್ ಪ್ರೈಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

               ಪ್ರಮಾಣಿತ ಜನಸಂಖ್ಯಾ ಪ್ರಕ್ಷೇಪಗಳನ್ನು ಬಳಸಿಕೊಂಡಿರುವ ಸಂಶೋಧಕರು ಬ್ರೆಝಿಲ್, ಚೀನಾ, ಈಜಿಫ್ಟ್ ಮತ್ತು ಘಾನಾಗಳಲ್ಲಿಯ ಶೇ.80ರಿಂದ ಶೇ.100ರಷ್ಟು ಜನರು 30 ವರ್ಷಗಳ ಅವಧಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ದೀರ್ಘಕಾಲೀನ ತೀವ್ರ ಬರಗಳಿಗೆ ತುತ್ತಾಗಲಿದ್ದಾರೆ ಎಂದು ವರದಿಯು ಬೆಟ್ಟು ಮಾಡಿದೆ.

            ಭಾರತಕ್ಕೆ ಸಂಬಂಧಿಸಿದಂತೆ, ಸುಮಾರು ಶೇ.50ರಷ್ಟು ಜನಸಂಖ್ಯೆಯು 30 ವರ್ಷಗಳ ಅವಧಿಯಲ್ಲಿ ಒಂದು ವರ್ಷ ಅಥವಾ ಹೆಚ್ಚಿನ ದೀರ್ಘಕಾಲೀನ ತೀವ್ರ ಬರಗಳಿಗೆ ತುತ್ತಾಗಲಿದ್ದಾರೆ ಎಂದು ವರದಿಯು ತಿಳಿಸಿದೆ.


ಇದಕ್ಕೆ ವ್ಯತಿರಿಕ್ತವಾಗಿ,ತಾಪಮಾನವನ್ನು ಪೂರ್ವ ಕೈಗಾರಿಕಾ ಮಟ್ಟಕ್ಕಿಂತ ಮೇಲೆ 1.5 ಡಿ.ಸೆ.ಗೆ ಸೀಮಿತಗೊಳಿಸುವ ಪ್ಯಾರಿಸ್ ಒಪ್ಪಂದದ ದೀರ್ಘಾವಧಿ ತಾಪಮಾನದ ಗುರಿಯನ್ನು ಸಾಧಿಸುವುದು ಈ ಅಧ್ಯಯನದಲ್ಲಿಯ ಎಲ್ಲ ದೇಶಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ ಎಂದು ವರದಿಯು ಬಿಂಬಿಸಿದೆ.

1.5 ಡಿ.ಸೆ.ಹೆಚ್ಚುವರಿ ತಾಪಮಾನದ ಸನ್ನಿವೇಶದಲ್ಲಿ ಬರ ಸಂಭವನೀಯತೆಯು ಬ್ರೆಝಿಲ್ ಮತ್ತು ಚೀನಾದಲ್ಲಿ ಮೂರು ಪಟ್ಟು, ಇಥಿಯೋಪಿಯಾ ಮತ್ತು ಘಾನಾದಲ್ಲಿ ಸುಮಾರು ಎರಡು ಪಟ್ಟುಗಳಷ್ಟಾಗಲಿದೆ ಹಾಗೂ ಭಾರತದಲ್ಲಿ ಸ್ಪಲ್ಪ ಮಟ್ಟಿಗೆ ಮತ್ತು ಈಜಿಫ್ಟ್ ನಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ತಿಳಿಸಿರುವ ಸಂಶೋಧಕರು,ತಾಪಮಾನ ಏರಿಕೆಯು ಎರಡು ಡಿ.ಸೆ.ಗಿಂತ ಹೆಚ್ಚಾದರೆ ಬರ ಸಂಭವನೀಯತೆಯು ಬ್ರಾಝಿಲ್ ಮತ್ತು ಚೀನಾದಲ್ಲಿ ನಾಲ್ಕು ಪಟ್ಟು, ಇಥಿಯೋಪಿಯಾ ಮತ್ತು ಘಾನಾದಲ್ಲಿ ದುಪ್ಪಟ್ಟು ಆಗಲಿದೆ ಹಾಗೂ ಈಜಿಪ್ತ್‌ನಲ್ಲಿ ಶೇ.90ಕ್ಕೂ ಅಧಿಕ ಮತ್ತು ಭಾರತದಲ್ಲಿ ಸುಮಾರು ಎರಡು ಪಟ್ಟು ಆಗಲಿದೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries