HEALTH TIPS

ಅಧ್ಯಕ್ಷರು ಯಾರೇ ಆದರೂ ಪಕ್ಷ ನಡೆಸುವವರು ಯಾರೆಂಬುದು ನಿಮಗೆ ಗೊತ್ತಿದೆ: ಅಮರಿಂದರ್

 

              ನವದೆಹಲಿ: ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ಯಾರೇ ಆದರೂ ಪಕ್ಷ ನಡೆಸುವವರು ಯಾರೆಂಬುದು ನಿಮಗೆ ಗೊತ್ತಿದೆ ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕುಟುಕಿದ್ದಾರೆ.

                 ಇತ್ತೀಚೆಗಷ್ಟೇ ಅಮರಿಂದರ್ ಸಿಂಗ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಅಲ್ಲದೆ ತಾವೇ ಸ್ಥಾಪಿಸಿದ್ದ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದರು.

              'ಸಿಎನ್‌ಎನ್-ನ್ಯೂಸ್18'ಗೆ ಪ್ರತಿಕ್ರಿಯಿಸಿರುವ ಅಮರಿಂದರ್ ಸಿಂಗ್, ಕಾಂಗ್ರೆಸ್‌ನಲ್ಲಿ ಅಧ್ಯಕ್ಷರ ನಿಜವಾದ ಅಧಿಕಾರದ ವಿಚಾರಕ್ಕೆ ಬಂದಾಗ ಪಕ್ಷ ಯಾರು ನಡೆಸಲಿದ್ದಾರೆಂಬುದು ನಿಮಗೆಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

                   ರಾಹುಲ್ ಗಾಂಧಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೇ ಎಂಬುದಕ್ಕೆ ಉತ್ತರಿಸಿದ ಅವರು, ಇದಕ್ಕೆ ರಾಹುಲ್ ಗಾಂಧಿ ಅವರೇ ಉತ್ತರ ನೀಡಬಲ್ಲರು. ನನ್ನನ್ನು ಏಕೆ ಪ್ರಶ್ನಿಸುತ್ತೀರಿ ಎಂದು ಹೇಳಿದರು.

                         ಹಾಗಿದ್ದರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಸಿಎಂ ಅಶೋಕ್ ಗೆಹಲೋತ್ ಉತ್ತಮ ಆಯ್ಕೆಯಾಗಬಹುದೇ ಎಂಬುದಕ್ಕೆ, ಯಾರಿಗೆ ಉತ್ತಮ? ಕಾಂಗ್ರೆಸ್ ಅಥವಾ ಗೆಹಲೋತ್ ಅಧ್ಯಕ್ಷರಾಗಲು ಬಯಸಿದವರಿಗೆ? ಎಂದು ಹೇಳಿದರು.

                     ಕಳೆದ ವರ್ಷ ಕಾಂಗ್ರೆಸ್ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಲ್ಲದೆ ಪಕ್ಷವನ್ನು ತೊರೆದಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries