HEALTH TIPS

ನಿಷೇಧದ ಬೆನ್ನಲ್ಲೇ ಪಿಎಫ್‌ಐನ ಟ್ವಿಟರ್, ಫೇಸ್‌ಬುಕ್ ಅಕೌಂಟ್‌ಗಳು ಡಿಲೀಟ್

 

      ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ಕೇಂದ್ರ ಸರ್ಕಾರವು ನಿಷೇಧಿಸಿರುವ ಬೆನ್ನಲ್ಲೇ ಆ ಸಂಘಟನೆಯ ಟ್ವಿಟರ್, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಅಳಿಸಲಾಗಿದೆ.

         ಭಾರತದಲ್ಲಿ ಮೆಟಾ ಒಡೆತನದ ಫೇಸ್‌ಬುಕ್ ಮತ್ತು ಟ್ವಿಟರ್ ಈ ಕ್ರಮ ಕೈಗೊಂಡಿವೆ.

ಅಲ್ಲದೇ ಪಿಎಫ್‌ಐ ಸಂಘಟನೆಯ ಮುಖಂಡರ ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಖಾತೆಯನ್ನೂ ಅಳಿಸಿ ಹಾಕಲಾಗಿದೆ.

              @PFIofficial ಖಾತೆಯನ್ನು ಅಳಸಿಹಾಕಲಾಗಿದೆ. 81,000 ಬೆಂಬಲಿಗರು ಟ್ವಿಟರ್‌ನಲ್ಲಿ ಇದಕ್ಕೆ ಇದ್ದರು. ಇದನ್ನು ನಿರ್ವಹಿಸುವ ಇಸ್ಲಾಮಿಕ ಸಂಘಟನೆಯ ಮುಖಂಡರಿಗೂ 81,000 ಬೆಂಬಲಿಗರು ಇದ್ದರು.

            ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರ್ಕಾರವು ಐದು ವರ್ಷಗಳ ಅವಧಿಗೆ ಬುಧವಾರ ನಿಷೇಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜಾಗತಿಕ ಮಟ್ಟದ ಭಯೋತ್ಪಾದನಾ ಸಂಘಟನೆ ಐಎಸ್‌ ಮತ್ತು ಇತರ ಉಗ್ರಗಾಮಿ ಸಂಘಟನೆಗಳ ಜತೆಗೆ ನಂಟು ಹೊಂದಿದೆ ಹಾಗೂ ದೇಶದೊಳಗೆ ಕೋಮುದ್ವೇಷ ಹರಡಲು ಸಂಘಟನೆಯು ಯತ್ನಿಸಿದೆ ಎಂದು ಆರೋಪಿಸಲಾಗಿದೆ.

           ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ವಿವಿಧ ರಾಜ್ಯಗಳ ಪೊಲೀಸರು ಇತ್ತೀಚಿನ ಕೆಲ ದಿನಗಳಲ್ಲಿ ಪಿಎಫ್‌ಐಗೆ ಸಂಬಂಧಿಸಿದ ಸ್ಥಳಗಳಲ್ಲಿ ಎರಡು ಬಾರಿ ಶೋಧ ನಡೆಸಿ, ಸಂಘಟನೆಯ ಹಲವು ಸದಸ್ಯರನ್ನು ಬಂಧಿಸಿದ್ದರು. ಅದಾದ ಬಳಿಕ ನಿಷೇಧದ ಆದೇಶ ಹೊರಬಿದ್ದಿದೆ. ಇದೇ 22ರಂದು ನಡೆದ ಶೋಧದ ಸಮಯದಲ್ಲಿ 106 ಮುಖಂಡರನ್ನು ಬಂಧಿಸಲಾಗಿತ್ತು. ಮಂಗಳವಾರ ನಡೆದ ಶೋಧದ ಸಂದರ್ಭದಲ್ಲಿ 170ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು ಅಥವಾ ವಶಕ್ಕೆ ಪಡೆಯಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries