ಕಾಸರಗೋಡು: ಪಯಸ್ವಿನಿ ನದಿಯ ಬಾವಿಕ್ಕೆರೆ ರೆಗ್ಯುಲೇಟರ್ ಬಳಿ ಸ್ನಾನಕ್ಕೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಕೊಲ್ಲಂ ಕಿರಿಂಕಾರದ ವಿ ವಿಜಿತ್ (23) ಮತ್ತು ತಿರುವನಂತಪುರದ ಕಡೈಕ್ಕವೂರ್‍ನ ಕೀಳಿಟಿಂಗಲ್ ಕೊಟ್ಟಪುರಂನ ಆರ್ ರಂಜು (24) ಎಂದು ಗುರುತಿಸಲಾಗಿದೆ. ಕಾಸರಗೋಡು ಹಿರಿಯ ಅಗ್ನಿಶಾಮಕ ದಳದ ಅಧಿಕಾರಿ ಕೆ.ವಿ.ಮನೋಹರ್ ನೇತೃತ್ವದಲ್ಲಿ ಮೇಲ್ಪರಂಬ ಇನ್ಸ್‍ಪೆಕ್ಟರ್ ಟಿ.ಉತ್ತಮದಾಸ್ ಹಾಗೂ ಅಗ್ನಿಶಾಮಕ ದಳದ ಪೋಲೀಸರು ನಡೆಸಿದ ಶೋಧದಲ್ಲಿ ನಿನ್ನೆ ತಡರಾತ್ರಿ ಮೃತದೇಹಗಳು ಪತ್ತೆಯಾಗಿವೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ವಿಜಿತ್ ಮತ್ತು ರಂಜು ಕೊಳತ್ತೂರು ಕಲ್ಲಳ್ಳಿಯ ಕೆ.ಶ್ರೀವಿಷ್ಣು ಸ್ನೇಹಿತರು. ಅವರು ಚೆನ್ನೈನ ಶ್ರೀಪೆರುಂಬತ್ತೂರ್‍ನಲ್ಲಿರುವ ಸಿಪಾರೊ ಟೂಲ್ಸ್ ಉತ್ಪಾದನಾ ಕಂಪನಿಯ ಉದ್ಯೋಗಿಗಳಾಗಿದ್ದರು. ಪರವನಡ್ಕದ ಮಣಿಅಂಗಣಂನ ಸಿ ವಿಷ್ಣು, ತಿರುವನಂತಪುರಂ ಪಳ್ಳಿಕ್ಕಾಡ್ ಕಡವಿಯ ಎಸ್ ವೈಶಾಖ್ ಮತ್ತು ಕುಂಬಳೆಯ ಅಬ್ದುಲ್ಖಾದರ್ ಸಿನಾನ್ ಅವರನ್ನೊಳಗೊಂಡ ಆರು ಸದಸ್ಯರ ತಂಡ ಇದೇ ತಿಂಗಳ 25 ರಂದು ಗೋವಾಕ್ಕೆ ವಿಹಾರಕ್ಕೆ ತೆರಳಿತ್ತು.
ಅಲ್ಲಿಂದ ಕಾಸರಗೋಡಿನ ರಾಣಿಪುರಂ ಪ್ರವಾಸಿ ಕೇಂದ್ರಕ್ಕೆ ಭೇಟಿ ನಿನ್ನೆ ನೀಡಿದ ಬಳಿಕ ಕಲ್ಲಳ್ಳಿಯಲ್ಲಿರುವ ಶ್ರೀವಿಷ್ಣು ಅವರ ಮನೆಗೆ ತಲುಪಿತು. ರಂಜು ಮತ್ತು ವಿಜಿತ್ ರಾತ್ರಿ 7 ಗಂಟೆಗೆ ಮಾವೇಲಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಮನೆಗೆ ಮರಳಲು ತಯಾರಿ ನಡೆಸುತ್ತಿದ್ದರು. ಶ್ರೀವಿಷ್ಣುವಿನ ಮನೆ ಬಳಿಯಿರುವ ಮಹಾಲಕ್ಷ್ಮೀಪುರಂ ತೂಗುಸೇತುವೆಗೆ ಭೇಟಿ ನೀಡಿದ ಬಳಿಕ ಇನ್ನೂ ಒಂದು ಗಂಟೆ ಬಾಕಿ ಇರುವ ಕಾರಣ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿದ್ದರು.
ಫೆÇೀಟೊ ತೆಗೆಸಿಕೊಂಡ ಬಳಿಕ ತೂಗುಸೇತುವೆಯ ಕೆಳಭಾಗದಲ್ಲಿ ಸ್ನಾನ ಮಾಡಲು ಇಳಿದರು. ಸ್ವಲ್ಪ ಹೊತ್ತಿನ ನಂತರ ಇಬ್ಬರು ಪ್ರವಾಹಕ್ಕೆ ಸಿಲುಕಿದರು. ಜೊತೆಗಿದ್ದವರ ಗಲಾಟೆ ಕೇಳಿ ಓಡಿ ಬಂದ ಸ್ಥಳೀಯರು ಹುಡುಕಾಟ ಆರಂಭಿಸಿರೂ ರಾತ್ರಿ ಹತ್ತು ಗಂಟೆ ಸುಮಾರಿಗೆ ಮೊದಲು ರಂಜು ಮೃತದೇಹ ಪತ್ತೆಯಾಗಿತ್ತು. ಹನ್ನೊಂದೂವರೆ ಗಂಟೆಗೆ ವಿಜಿತ್ ಶವವೂ ಪತ್ತೆಯಾಯಿತು.
ಸಾವಿನಲ್ಲೂ ಒಂದಾದ ಸಹಪಾಠಿಗಳು: ಕಾಸರಗೋಡಲ್ಲಿ ಗೆಳೆಯನ ಮನೆಗೆ ಬಂದ ಇಬ್ಬರು ನೀರಲ್ಲಿ ಮುಳುಗಿ ದುರ್ಮರಣ
0
ಸೆಪ್ಟೆಂಬರ್ 29, 2022





