ಕಾಸರಗೋಡು : ಪ್ಲಸ್ ವನ್ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿರುವ ಕೆಲವು ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಇಂದು ಹರಿದಾಡುತ್ತಿದೆ. ಕುಂಬಳೆ ಸಮೀಪದ ಪುತ್ತಿಗೆಯ ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿ ರ್ಯಾಗಿಂಗ್ ಗೆ ಬಲಿಯಾದವನೆಂದು ತಿಳಿದುಬಂದಿದೆ. ಮನೆಗೆ ತೆರಳಲು ಮುಂದಾಗಿದ್ದ ಬಾಲಕನನ್ನು ಬಸ್ ನಿಲ್ದಾಣದಲ್ಲಿ ಹಿರಿಯ ವಿದ್ಯಾರ್ಥಿಗಳು ರ್ಯಾಗ್ ಮಾಡಿರುವುದು ಕಂಡುಬಂದಿದೆ. ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಗುಂಪಿನ ಮಧ್ಯೆ ವಿದ್ಯಾರ್ಥಿಯನ್ನು ರ್ಯಾಗ್ ಮಾಡುತ್ತಿರುವ ಎರಡು-ಮೂರು ದೃಶ್ಯಾವಳಿಗಳು ಕಂಡುಬಂದಿದೆ. ಬಳಿಕ ಸ್ಥಳೀಯರು ಮಧ್ಯ ಪ್ರವೇಶಿಸಿದರು. ಹಿರಿಯ ವಿದ್ಯಾರ್ಥಿಗಳ ವಿರುದ್ಧ ಬಾಲಕನ ತಂದೆ ಪೋಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.
ಬುಧವಾರ ಸಂಜೆ ಈ ಘಟನೆ ನಡೆದಿದೆ. ಹಿರಿಯ ವಿದ್ಯಾರ್ಥಿಗಳು ಪ್ಲಸ್ ವನ್ ವಿದ್ಯಾರ್ಥಿಯಲ್ಲಿ ಕಾಲ್ಪನಿಕವಾಗಿ ಮೋಟಾರ್ ಸೈಕಲ್ ಓಡಿಸುವಂತೆ ನಟಿಸಲು ಒತ್ತಾಯಿಸುತ್ತಿರುವುದು ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿದೆ. ಹೆದರಿದ ವಿದ್ಯಾರ್ಥಿಗೆ ಬೆದರಿಕೆ ಹಾಕಿದ ನಂತರ ಮೋಟಾರ್ ಸೈಕಲ್ ಓಡಿಸುತ್ತಿರುವಂತೆ ತೋರಿಸಲಾಗಿದೆ. ಈ ದೃಶ್ಯಾವಳಿ ಹೊರಬಿದ್ದ ಬಳಿಕ ಬಾಲಕನ ತಂದೆ ಪೋಲೀಸರ ಮೊರೆ ಹೋಗಿದ್ದಾರೆ. ಕುಂಬಳೆ ಪೋಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.





