HEALTH TIPS

ಭಾರತ್‌ ಜೋಡೊ ಯಾತ್ರೆ: ಮಹಾತ್ಮ ಗಾಂಧಿ ನೆಟ್ಟಿದ್ದ ಮರಕ್ಕೆ ರಾಹುಲ್‌ ಗಾಂಧಿ ನಮನ

 

          ಕೊಚ್ಚಿ: ಕಾಂಗ್ರೆಸ್‌ ಕೈಗೊಂಡಿರುವ ಭಾರತ್‌ ಜೋಡೊ ಯಾತ್ರೆಗೆ ಕೇರಳದಲ್ಲಿ ಗುರುವಾರವೂ ಭಾರಿ ಬೆಂಬಲ ದೊರೆಯಿತು. ಆಲುವಾದಲ್ಲಿರುವ ಯೂನಿಯನ್‌ ಕ್ರಿಸ್ಚಿಯನ್‌ (ಯು.ಸಿ) ಕಾಲೇಜಿನಲ್ಲಿ 15ನೇ ದಿನದ ಯಾತ್ರೆಗೆ ಚಾಲನೆ ನೀಡಲಾಯಿತು.

             ಮಹಾತ್ಮ ಗಾಂಧಿಯವರು 1925ರ ಮಾರ್ಚ್‌ 18ರಂದು ಯು.ಸಿ.ಕಾಲೇಜಿಗೆ ಭೇಟಿ ನೀಡಿದ್ದರು.

ಆ ನೆನಪಿಗಾಗಿ ಕಾಲೇಜು ಆವರಣದಲ್ಲಿ ಮಾವಿನ ಸಸಿಯೊಂದನ್ನು ನೆಟ್ಟಿದ್ದರು. ಅದು ಬೃಹದಾಕಾರವಾಗಿ ಬೆಳೆದಿದ್ದು, ಆ ಮರಕ್ಕೆ ನಮನ ಸಲ್ಲಿಸುವ ಮೂಲಕ ರಾಹುಲ್‌ ಗಾಂಧಿ ಯಾತ್ರೆ ಆರಂಭಿಸಿದರು.

                   ಇದಕ್ಕೂ ಮುನ್ನ ಅವರು ಯಾತ್ರಿಗಳ ತಂಡವೊಂದು ಲಕ್ಷದ್ವೀಪದಿಂದ ತಂದಿದ್ದ ಸಸಿಯನ್ನು ಕಾಲೇಜು ಆವರಣದಲ್ಲಿ ನೆಟ್ಟರು.

                   ಬೆಳಿಗ್ಗೆ 6.30ಕ್ಕೆ ಆರಂಭವಾದ ಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ರಾಹುಲ್‌ ಜೊತೆ ಕಾರ್ಯಕರ್ತರು ಉತ್ಸುಕತೆಯಿಂದ ಹೆಜ್ಜೆ ಹಾಕಿದರು. ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯು ಕಾರ್ಯಕರ್ತರಿಂದ ತುಂಬಿ ಹೋಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಪಕ್ಷದ ಧ್ವಜಗಳು ರಾರಾಜಿಸುತ್ತಿದ್ದವು.

                  ಮುಂಜಾನೆ ಅವಧಿಯ ಯಾತ್ರೆಯು 11 ಕಿ.ಮೀ ದೂರವನ್ನು ಕ್ರಮಿಸಿ ಅಂಗಮಾಲಿಯ ಕರುಕುಟ್ಟಿ ಕಾಪ್ಪೆಲಾ ವೃತ್ತದಲ್ಲಿ ಕೊನೆಗೊಂಡಿತು. ಸಂಜೆ 5 ಗಂಟೆಗೆ ಚಿರಂಗರಾ ಬಸ್‌ ನಿಲ್ದಾಣದಿಂದ ಆರಂಭವಾದ ಯಾತ್ರೆ ಚಾಲಕುಡಿ ಪುರಸಭೆ ಬಳಿ ಮುಕ್ತಾಯವಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries