ಕುಂಬಳೆ: ಮಂಜೇಶ್ವರದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯನ್ನು ಎತ್ತಿ ತೋರಿಸಿ ಮಂಜೇಶ್ವರ ಜನಕೀಯ ವೇದಿಕೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯು ಅಕ್ಟೋಬರ್ 31 ಸೋಮವಾರ ಪ್ರತಿಭಟನಾ ಧರಣಿಯನ್ನು ಆಯೋಜಿಸುತ್ತಿದೆ.
ಮಂಜೇಶ್ವರ ರಾಗಂ ಜಂಕ್ಷನ್ ನಿಂದ ಗೋವಿಂದ ಪೈ ಕಾಲೇಜು ರಸ್ತೆ ವರೆಗಿನ ರಾಷ್ಟ್ರೀಯ ಹೆದ್ದಾರಿ ನಡುವೆ ಅಂಡರ್‍ಪಾಸ್‍ಗೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯೊಂದಿಗೆ ಜನಕೀಯ ವೇದಿಕೆಯ ಪದಾಧಿಕಾರಿಗಳು ಸೂಚನಾ ಧರಣಿ ನಡೆಸುತ್ತಿರುವುದಾಗಿ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ವಿಭಜನೆಯಾಗುತ್ತಿದೆ. ಮಂಜೇಶ್ವರ, ವರ್ಕಾಡಿ, ಬೆಳ್ಮ, ಮುಡಿಪ್ಪು ಪ್ರದೇಶಗಳಿಂದ ಆಗಮಿಸುವ ನಿವಾಸಿಗಳು, ಗೋವಿಂದಪೈ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮಂಜೇಶ್ವರ ರೈಲು ನಿಲ್ದಾಣವನ್ನು ಅವಲಂಬಿಸಿರುವ ಇತರ ಜನರು ಪ್ರಯಾಣ ಸಂಕಷ್ಟ ಎದುರಿಸಬೇಕಾಗುತ್ತದೆ.
ಪ್ರಸ್ತುತ ನಿರ್ಮಾಣದ ಅವೈಜ್ಞಾನಿಕತೆಯ ಬಗ್ಗೆ ಸ್ಥಳೀಯ ಶಾಸಕ ಎ.ಕೆ.ಎಂ.ಅಶ್ರಫ್ ಅವರಿಗೆ ಮನವಿ ನೀಡಿ ಮನವರಿಕೆ ಮಾಡಿಕೊಡಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾ.ಹೆದ್ದಾರಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಸಕಾರಿಯಾ ಶಾಲಿಮಾರ್(ಅಧ್ಯಕ್ಷ), ಅಶ್ರಫ್ ಬಡಾಜೆ(ಪ್ರಧಾನ ಕಾರ್ಯದರ್ಶಿ), ನೈನ್ಮಾರ್ ಅಹಮ್ಮದ್(ಕಾರ್ಯದರ್ಶಿ), ಇಬ್ರಾಹಿಂ ಬಟರ್ ಪ್ಲೈ(ಖಜಾಂಜಿ), ಯಾದವ ಬಡಾಜೆ(ಉಪಾಧ್ಯಕ್ಷ) ಉಪಸ್ಥಿತರಿದ್ದು ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ: 31 ರಂದು ಮಂಜೇಶ್ವರದಲ್ಲಿ ಸಾರ್ವಜನಿಕÀ ಪ್ರತಿಭಟನಾ ಧರಣಿ
0
ಅಕ್ಟೋಬರ್ 29, 2022
Tags




.jpg)
