HEALTH TIPS

ಜಲಾಂತರ್ಗಾಮಿ 'ಐಎನ್‌ಎಸ್‌ ಅರಿಹಂತ'ದಿಂದ ಕ್ಷಿಪಣಿಯ ಯಶಸ್ವಿ ಉಡಾವಣೆ

 

             ನವದೆಹಲಿ: ಜಲಾಂತರ್ಗಾಮಿ 'ಐಎನ್‌ಎಸ್‌ ಅರಿಹಂತ'ದಿಂದ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು (ಎಸ್‌ಎಲ್‌ಬಿಎಂ) ಬಂಗಾಳ ಕೊಲ್ಲಿಯಲ್ಲಿ ಶುಕ್ರವಾರ ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

                 'ಬಂಗಾಳ ಕೊಲ್ಲಿಯಲ್ಲಿ ಪೂರ್ವನಿರ್ಧರಿತ ಗುರಿಯನ್ನು ಈ ಕ್ಷಿಪಣಿಯು ಬಹಳ ನಿಖರವಾಗಿ ತಲುಪಿತು.ಈ ಕ್ಷಿಪಣಿ ವ್ಯವಸ್ಥೆಯ ಕಾರ್ಯಾಚರಣೆ ಹಾಗೂ ತಾಂತ್ರಿಕ ಪರಿಮಾಣಗಳನ್ನು ಈ ಪರೀಕ್ಷೆ ಸಾಬೀತುಪಡಿಸಿತು. ಇದು ಭಾರತದ ಪಡೆಗಳ ದಾಳಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ' ಎಂದು ಸಚಿವಾಲಯ ಹೇಳಿದೆ.

                      ಈ ಕ್ಷಿಪಣಿ ವ್ಯವಸ್ಥೆಯನ್ನು 'ಜಲಾಂತರ್ಗಾಮಿಯಿಂದ ಉಡಾಯಿಸಿದ ಬ್ಯಾಲಿಸ್ಟಿಕ್‌ ಕ್ಷಿಪಣಿ' (ಎಸ್‌ಎಲ್‌ಬಿಎಂ) ಎನ್ನಲಾಗುತ್ತದೆ. ಅಣ್ವಸ್ತ್ರ ದಾಳಿಗೆ ಪ್ರತಿರೋಧ ಒಡ್ಡುವ ಸಾಮರ್ಥ್ಯವನ್ನು ಈ ಕ್ಷಿಪಣಿ ವ್ಯವಸ್ಥೆ ಹೊಂದಿದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ಇಂಥ ಕ್ಷಿಪಣಿ ವ್ಯವಸ್ಥೆಯೂ ಆಗಿದೆ.

                 'ಐಎನ್‌ಎಸ್‌ ಅರಿಹಂತ' ಜಲಾಂತರ್ಗಾಮಿಯು 750 ಕಿ.ಮೀ. (ಕೆ-15) ಹಾಗೂ 3,500 ಕಿ.ಮೀ. (ಕೆ-4) ದೂರಕ್ಕೆ ಚಿಮ್ಮಬಲ್ಲ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries