ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡಘಟಕ ಕಾಸರಗೋಡು ಮತ್ತು ಜಿಲ್ಲಾ ಲೇಖಕರ ಸಂಘದ ಆಶ್ರಯದಲ್ಲಿ ಲೇಖಕ ವೈ.ಸತ್ಯನಾರಾಯಣ ಅವರ 'ನಮ್ಮ ನಿಮ್ಮ ಕತೆಗಳು' ಎಂಬ ಕೃತಿಯ ಬಿಡುಗಡೆ ಮತ್ತು ಗೌರವಾರ್ಪಣೆ ಸಮಾರಂಭ ಅ. 30ರಂದು ಮಧ್ಯಾಹ್ನ 3ಕ್ಕೆ ಕಾಸರಗೋಡು ಬ್ಯಾಂಕ್ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ಜರುಗಲಿದೆ.
ಪ್ರೊ. ಪಿ.ಎನ್ ಮೂಡಿತ್ತಾಯ ಅಧ್ಯಕ್ಷತೆ ವಹಿಸುವರು. ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಕೃತಿ ಬಿಡುಗಡೆಗೊಳಿಸುವರು. ನಿವೃತ್ತ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ಹಾಗೂ ಕವಿ, ಚಿತ್ರಕಲಾವಿದ ಬಾಲ ಮಧುರಕಾನನ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕವಿ ರಾಧಾಕೃಷ್ಣ ಉಳಿಯತ್ತಡ್ಕ ಕೃತಿಪರಿಚಯ ನೀಡುವರು. ಈ ಸಂದರ್ಭ ಡಾ. ಹರಿಕೃಷ್ಣ ಭರಣ್ಯ ಹಾಗೂ ಬಾಲ ಮಧುರಕಾನನ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು. ಲೇಖಕ ವೈ. ಸತ್ಯನಾರಾಯಣ ಅವರು ಅನಿಸಿಕೆ ವ್ಯಕ್ತಪಡಿಸುವರು.
ನಾಳೆ 'ನಮ್ಮ ನಿಮ್ಮ ಕತೆಗಳು' ಕೃತಿ ಬಿಡುಗಡೆ, ಗೌರವಾರ್ಪಣೆ
0
ಅಕ್ಟೋಬರ್ 28, 2022

