ನವದೆಹಲಿ: ಯುದ್ಧಪೀಡಿತ ಅಫ್ಗಾನಿಸ್ತಾನಕ್ಕೆ ಭಾರತ ಮಂಗಳವಾರ ಮತ್ತೊಮ್ಮೆ ಅಗತ್ಯ ಔಷಧಗಳು ಮತ್ತು ವೈದ್ಯಕೀಯ ಪರಿಕರಗಳನ್ನು ರವಾನಿಸಿದೆ. ಈ ಎಲ್ಲ ಪರಿಕರಗಳನ್ನು ಕಾಬೂಲ್‌ನಲ್ಲಿರುವ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ.
'ಕಳೆದ ಕೆಲವು ತಿಂಗಳ ಈಚೆಗೆ ಭಾರತ, ಕ್ಷಯರೋಗ ನಿರೋಧಕ ಔಷಧಗಳು, 50,000 ಡೋಸ್ ಕೋವಿಡ್ ಲಸಿಕೆ ಸೇರಿ 45 ಟನ್ ವೈದ್ಯಕೀಯ ಪರಿಕರಗಳನ್ನು ನೀಡುವ ಮೂಲಕ ಅಫ್ಗಾನಿಸ್ತಾನಕ್ಕೆ ನೆರವಾಗಿದೆ. ಇದು ಭಾರತ ಈಚಿನ ತಿಂಗಳುಗಳಲ್ಲಿ ಕಳುಹಿಸುತ್ತಿರುವ 13ನೇ ನೆರವಿನ ಕೊಡುಗೆಯಾಗಿದೆ ' ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಅಲ್ಲದೆ ಅಲ್ಲಿನ ಜನರಿಗಾಗಿ 40,000 ಟನ್ ಗೋಧಿ ಪೂರೈಸಲಾಗಿದೆ ಎಂದು ತಿಳಿಸಿದೆ.