ಬದಿಯಡ್ಕ: ಅಗಲ್ಪಾಡಿ ಅನ್ನಪೂರ್ಣೇಶ್ವರಿ ಶಾಲೆಯಲ್ಲಿ ಆರೋಗ್ಯ ಇಲಾಖೆಯು ನಡೆಸಿದ ಟಾಸ್(ಪ್ರಸರಣ ಮೌಲ್ಯಮಾಪನ) ಸಮೀಕ್ಷೆ ಪ್ರಾರಂಭವಾಗಿದೆ. ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸವಳಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ (ಸಿ.ಎಚ್.ಸಿ) ನೇತೃತ್ವದಲ್ಲಿ ಸಮೀಕ್ಷೆ ನಡೆಯುತ್ತಿದೆ. ಸಿಎಚ್ ಸಿ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್, ಮುಖ್ಯ ಶಿಕ್ಷಕ ಕೆ.ಸತ್ಯನಾರಾಯಣ ಭಟ್, ಲ್ಯಾಬ್ ಟೆಕ್ನಿಷಿಯನ್ ಸಿ.ದಿವ್ಯಾ, ಕಿರಿಯ ಆರೋಗ್ಯ ನಿರೀಕ್ಷಕ ಬೈಜು ಎಸ್.ರಾಮ್, ಜೆಪಿಎಚ್‍ಎನ್‍ಗಳಾದ ಎ.ಜಿ.ಲೀನಾ, ಜಯಕುಮಾರಿ, ಶಿಕ್ಷಕಿಯರಾದ ಪಿ.ಅಂಕಿತಾ, ಎಂ.ಸೌಮ್ಯಕುಮಾರಿ ಮುಂದಾವರು ಉಪಸ್ಥಿತರಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ಕೈಗೊಂಡಿರುವ ಚಟುವಟಿಕೆಗಳ ಮೂಲಕ ಮಲೇರಿಯಾ, ಕಾಲರಾ ಮತ್ತು ಆನೆಕಾಲು ರೋಗಗಳನ್ನು ನಿರ್ಮೂಲನೆ ಮಾಡುವ ಗುರಿಯತ್ತ ಕೇರಳ ಸಾಗುತ್ತಿದೆ. 2027 ರ ವೇಳೆಗೆ ರೋಗವನ್ನು ಕೊನೆಗೊಳಿಸುವ ಗುರಿಯನ್ನು ಸಾಧಿಸಲು ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. 2015ರಿಂದ ಸಮುದಾಯ ರೋಗ ಚಿಕಿತ್ಸಾ ಯೋಜನೆಯ ಮೂಲಕ ರೋಗ ಹರಡುವುದನ್ನು ನಿಯಂತ್ರಿಸಲು ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಅದರ ಪರಿಣಾಮಕಾರಿತ್ವವನ್ನು ನಿರ್ಧರಿಸಲು ಪ್ರಸರಣ ಮೌಲ್ಯಮಾಪನ ಸಮೀಕ್ಷೆಯನ್ನು 2017 ಮತ್ತು 2019 ರಲ್ಲಿ ನಡೆಸಲಾಗಿತ್ತು. ಸಮೀಕ್ಷೆಯ ಭಾಗವಾಗಿ, 1 ಮತ್ತು 2 ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ರೋಗ ಹರಡುವಿಕೆಯನ್ನು ಪತ್ತೆಹಚ್ಚಲು ಪರೀಕ್ಷೆಯ ಉದ್ದೇಶವಾಗಿದೆ. 2017 ಮತ್ತು 2019 ರಲ್ಲಿ ನಡೆಸಿದ ಸಮೀಕ್ಷೆಗಳು ಸಮುದಾಯದಲ್ಲಿ ಕಡಿಮೆ ಹರಡುವಿಕೆಯ ಪ್ರಮಾಣವನ್ನು ಮಾತ್ರ ಕಂಡುಕೊಂಡಿವೆ.
ಕುಂಬಳೆ ಸಿಎಚ್ ಸಿ ನೇತೃತ್ವದಲ್ಲಿ ಬದಿಯಡ್ಕ, ಪುತ್ತಿಗೆ, ಕುಂಬಳೆ ಶಾಲೆಗಳಲ್ಲಿ ಸಮೀಕ್ಷೆ ನಡೆಯಲಿದೆ.
ಆರೋಗ್ಯ ಇಲಾಖೆಯ ಟಾಸ್ ಕಾರ್ಯಕ್ರಮ ಕುಂಬ್ಡಾಜೆಯಲ್ಲಿ ಆರಂಭ
0
ಅಕ್ಟೋಬರ್ 18, 2022
Tags




-TAS%20survey.jpg)
