HEALTH TIPS

ಜಗತ್ತು ಮತ್ತೊಂದು ಶೀತಲ ಸಮರಕ್ಕೆ ತೆರೆದುಕೊಳ್ಳಬಾರದು: ಜಿ20 ಶೃಂಗಸಭೆಯಲ್ಲಿ ಇಂಡೋನೇಷ್ಯಾ ಅಧ್ಯಕ್ಷ ವಿಡೋಡೊ ಕಳವಳ

 

           ಬಾಲಿ: ವಿಶ್ವಸಂಸ್ಥೆಯ ಸೂಚನೆ, ಮಾರ್ಗದರ್ಶನ, ಸಾರ್ವಭೌಮವನ್ನು ಅನುಸರಿಸುವಂತೆ ವಿಶ್ವ ನಾಯಕರಿಗೆ ಕರೆ ನೀಡಿರುವ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ, ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

         ಇಂದು ಇಂಡೋನೇಷ್ಯಾ ರಾಜಧಾನಿ ಬಾಲಿಯಲ್ಲಿ ಆರಂಭಗೊಂಡಿರುವ ಜಿ20 ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾತನಾಡಿದ ಅವರು, ವಿಶ್ವದ ಜನತೆಗೆ ನಾಯಕರು ಜವಾಬ್ದಾರರಾಗಿರುತ್ತಾರೆ, ಜವಾಬ್ದಾರಿಯುತವಾಗಿರುವುದು ಎಂದರೆ ವಿಶ್ವಸಂಸ್ಥೆಯ ಸಾರ್ವಭೌಮತೆಯನ್ನು ನಿರಂತರವಾಗಿ ಅನುಸರಿಸುವುದು ಎಂದರ್ಥ ಎಂದಿದ್ದಾರೆ.

             ಇಂದು ಬಾಲಿಯಲ್ಲಿ ಆರಂಭಗೊಂಡ ಶೃಂಗಸಭೆಯ ಮೊದಲ ಅಧಿವೇಶನದಲ್ಲಿ ಮಾತನಾಡಿದ ಅವರು, ಜವಾಬ್ದಾರಿಯುತವಾಗಿ ವರ್ತಿಸುವುದು ಎಂದರೆ ಯುದ್ಧವನ್ನು ಕೊನೆಗಾಣಿಸುವುದು ಎಂದರ್ಥ. ಇಂಡೋನೇಷ್ಯಾದ ಭಾಷೆ ಬಹಸದಲ್ಲಿ ತಮ್ಮ ಬಹುತೇಕ ಮಾತುಗಳನ್ನು ಆಡಿದ ಅವರು, ಭಾಷಣದಲ್ಲಿ ಎಲ್ಲಿಯೂ ರಷ್ಯಾ ಅಥವಾ ಉಕ್ರೇನ್ ಹೆಸರನ್ನು ಪ್ರಸ್ತಾಪಿಸಲಿಲ್ಲ. 

                    ಯುದ್ಧ ಕೊನೆಯಾಗದಿದ್ದರೆ ನಾವು ಮುಂದಕ್ಕೆ ಹೋಗುವುದು ಕಷ್ಟವಿದೆ. ಜಗತ್ತು ಮತ್ತೊಂದು ಶೀತಲ ಸಮರಕ್ಕೆ ಸಾಕ್ಷಿಯಾಗಬಾರದು ಎಂದರು.ಶೃಂಗಸಭೆಯ ಮುಂದಿನ ಎರಡು ದಿನ ಕೋವಿಡ್-19 ಸಾಂಕ್ರಾಮಿಕ ಹಾಗೂ ಅದರಿಂದ ಏನೇನು ಕಷ್ಟಗಳನ್ನು ಎದುರಿಸಬೇಕಾಯಿತು, ಇತ್ತೀಚಿನ ರಷ್ಯಾ-ಉಕ್ರೇನ್ ಯುದ್ಧ ಬಗ್ಗೆ ಸಹ ಚರ್ಚಿಸಲಿದ್ದಾರೆ. 

              ಇಂದು ಬೆಳಗ್ಗೆ ಶೃಂಗಸಭೆ ನಡೆಯುವ ವೇದಿಕೆಗೆ ಪ್ರಧಾನಿ ಮೋದಿಯವರನ್ನು ಇಂಡೋನೇಷಿಯಾ ಅಧ್ಯಕ್ಷ ವಿಡೋಡೋ ಬರಮಾಡಿಕೊಂಡರು. 

                ಇಂಡೋನೇಷ್ಯಾದಲ್ಲಿ ಶೃಂಗಸಭೆ ಮುಗಿದ ನಂತರ ಮುಂದಿನ ವರ್ಷ ಭಾರತವು ಆತಿಥ್ಯ ವಹಿಸಲಿದೆ. ಕಳೆದ ವರ್ಷ ಇಂಡೋನೇಷ್ಯಾ ಜಿ20ಯ ಆತಿಥ್ಯೇಯ ವಹಿಸಿಕೊಂಡಾಗ 'ಒಟ್ಟಿಗೆ ಚೇತರಿಸಿಕೊಳ್ಳಿ, ಬಲಶಾಲಿಯಾಗಿ ಚೇತರಿಸಿಕೊಳ್ಳಿ' ಎಂಬುದು ಇಂಡೋನೇಷ್ಯಾ ಆಯ್ಕೆಮಾಡಿದ ಧ್ಯೇಯವಾಕ್ಯವಾಗಿತ್ತು. ಕಳೆದ ಫೆಬ್ರವರಿಯಲ್ಲಿ ಪ್ರಾರಂಭವಾದ ರಷ್ಯಾ-ಉಕ್ರೇನ್ ಯುದ್ಧವು ಈಗ ಆಹಾರ ಮತ್ತು ಇಂಧನ ಕೊರತೆಯ ಸಮಸ್ಯೆಯನ್ನು ಒತ್ತಿಹೇಳುತ್ತಿದೆ. 

                ಈ ಬಾರಿ ಜಿ20 ನಾಯಕರು ಮೂರು ಮುಖ್ಯ ಅಧಿವೇಶನಗಳನ್ನು ನಡೆಸುತ್ತಾರೆ- ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ರೂಪಾಂತರಗಳು ಮತ್ತು ಆರೋಗ್ಯ. ಈ ಮೂರರಲ್ಲೂ ಮೋದಿಯವರು ಭಾಗವಹಿಸುವ ನಿರೀಕ್ಷೆ ಇದೆ.

              ಶೃಂಗಸಭೆಯ ಹೊರತಾಗಿ, ಪ್ರಧಾನಿ ಮೋದಿ ನಾಳೆ ಇಂಡೋನೇಷ್ಯಾ ಅಧ್ಯಕ್ಷ ವಿಡೋಡೋ, ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಸಿಂಗಾಪುರದ ಪ್ರಧಾನಿ ಲೀ ಹ್ಸಿಯೆನ್ ಲೂಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಭಾರತ ಇಲ್ಲಿಯವರೆಗೆ ಘೋಷಿಸಿದ ಪಟ್ಟಿಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೆಸರನ್ನು ಉಲ್ಲೇಖಿಸಿಲ್ಲ, 2020 ರಲ್ಲಿ ಎರಡೂ ಕಡೆಯ ಸೈನಿಕರ ನಡುವಿನ ಗಾಲ್ವಾನ್ ಕಣಿವೆ ಘರ್ಷಣೆಯ ನಂತರ ಪ್ರಧಾನಿ ಮೋದಿ-ಕ್ಸಿ ಜಿನ್ ಪಿಂಗ್ ಅವರು ಮುಖಾಮುಖಿಯಾಗಿ ಭೇಟಿ ಮಾಡಿಲ್ಲ.

                 ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್ ಅವರೊಂದಿಗಿನ ಪ್ರತ್ಯೇಕ ಸಭೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. 

              19 ದೇಶಗಳನ್ನು ಒಳಗೊಂಡ ಜಿ20: ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್, ಯುಎಸ್ಎ ಮತ್ತು ಐರೋಪ್ಯ ಒಕ್ಕೂಟ(EU)ಗಳು ಸೇರಿವೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries