HEALTH TIPS

ಮಲಗುವ ಕೋಣೆ ತುಂಬಾ ಕತ್ತಲಾಗಿದ್ದರೆ ಮಧುಮೇಹ ನಿಯಂತ್ರಣ ಜೊತೆಗೆ ಈ ಪ್ರಯೋಜನಗಳಿವೆ

 ನಿದ್ದೆ ಎಂಬುವುದು ತುಂಬಾ ಮುಖ್ಯ. ನಿದ್ದೆ ಕಡಿಮೆಯಾದರೆ ಅಂದರೆ ಸರಿಯಾದ ನಿದ್ದೆ ಆಗದಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ದೇಹ ದುರ್ಬಲವಾಗುವುದು. ಕೆಲವರು ನಿದ್ದೆ ಬಂದಿಲ್ಲವೆಂದು ತುಂಬಾ ಒದ್ದಾಡುತ್ತಾರೆ, ಎಷ್ಟು ಗಂಟೆ ನಿದ್ದೆ ಮಾಡಿದ್ದೇವೆ ಅನ್ನುವುದಕ್ಕಿಂತ ಎಷ್ಟು ಗಂಟೆ ನಿದ್ದೆ ಮಾಡಿದ್ದೇವೆ ಎಂಬುವುದು ಮುಖ್ಯವಾಗುತ್ತೆ.

ನಿಮಗೆ ನಿದ್ದೆ ಚೆನ್ನಾಗಿ ಬರಬೇಕಾದರೆ ಕತ್ತಲೆ ಕೋಣೆಯಲ್ಲಿ ಮಲಗಬೇಕೆಂದು ಲೈಫ್‌ಸ್ಟೈಲ್‌ ಎಕ್ಸ್‌ಪರ್ಟ್‌ಗಳು ಹೇಳುತ್ತಾರೆ. ಒಳ್ಳೆಯ ನಿದ್ದೆ ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದು ಎಂಬುವುದು ಗೊತ್ತೇ?

ಬೆಡ್‌ರೂಂಗೆ ಹೊರಗಡೆಯಿಂದ ಲೈಟ್‌ ಬೀಳುತ್ತಿದ್ದರೆ ಅಥವಾ ಬೆಡ್‌ರೂಂ ಮಂದವಾದ ಬೆಳಕಿದ್ದರೆ ಇನ್ನು ಮುಂದೆ ಬೆಡ್‌ರೂಂ ಅನ್ನು ಸಂಪೂರ್ಣ ಕತ್ತಲೆ ಮಾಡಿ ಮಲಗಿ. ಕತ್ತಲೆ ಕೋಣೆ ನಿದ್ದೆ ಹೇಗೆ ಸಹಕಾರಿ ಎಂದು ನೋಡೋಣ ಬನ್ನಿ:

ಬೇಗನೆ ನಿದ್ದೆ ಬರುತ್ತದೆ

ಸ್ವಲ್ಪ ಬೆಳಕು ಇರುವ ಕೋಣೆಗಿಂತ, ಕತ್ತಲಾಗಿರುವ ಕೋಣೆಯಲ್ಲಿ ಮಲಗಿದರೆ ಬೇಗನೆ ನಿದ್ದೆ ಬರುತ್ತೆ.ಏಕೆಂದರೆ ಕತ್ತಲಿನನಲ್ಲಿ ನಮ್ಮ ದೇಹವು ಮೆಲಟೊನಿನ್ ಉತ್ಪತ್ತಿ ಹೆಚ್ಚಿಸುತ್ತೆ, ಇದರಿಂದ ಬೇಗನೆ ನಿದ್ದೆ ಬರುತ್ತದೆ. ಬರೀ ನಿದ್ದೆಯಲ್ಲ ಗಾಢವಾದ ನಿದ್ದೆ ಬರುತ್ತೆ.

ಬೇಗನೆ ನಿದ್ದೆ ಮಾಡಿದಾಗ ಮನಸ್ಸು ಮತ್ತು ದೇಹ ಬೇಗನೆ ರಿಲ್ಯಾಕ್ಸ್ ಆಗುತ್ತೆ, ಆದ್ದರಿಂದ ನಿದ್ದೆ ಬಾರದೇ ಒದ್ದಾಡುವ ಬದಲು ನಿಮ್ಮ ಕೋಣೆಯನ್ನು ಸಂಪೂರ್ಣ ಕತ್ತಲು ಮಾಡಿ ನಿದ್ದೆ ಮಾಡಿ.

ಆರೋಗ್ಯ ವೃದ್ಧಿಸುತ್ತೆ

ಬೆಳಕಿನಲ್ಲಿ ಅಂದರೆ ಲೈಟ್ ಹಾಕಿ ಮಲಗುವ ಅಭ್ಯಾಸದಿಂದ ತೂಕ ಹೆಚ್ಚಾಗುವ ಸಾಧ್ಯತೆ ಶೇ. 50ರಷ್ಟು ಅಧಿಕ ಎಂದು ತಜ್ಞರು ಹೇಳುತ್ತಾರೆ.

ಅಲ್ಲದೆ ಬೆಳಕಿನಲ್ಲಿ ಮಲಗುವುದರಿಂದ ಚಯಪಚಯಕ್ರಿಯೆ ಕಡಿಮೆಯಾಗುವುದು, ಇದರಿಂದಾಗಿ ಮೈ ತೂಕ ಹೆಚ್ಚಾಗುವುದು. ಅದೇ ಕತ್ತಲೆ ಕೋಣೆಯಲ್ಲಿ ಮಲಗಿದರೆ ಚಯಪಚಯಕ್ರಿಯೆ ಉತ್ತಮವಾಗುತ್ತೆ, ಇದರಿಂದ ಆರೋಗ್ಯಕರ ಮೈ ತೂಕ ಹೊಂದಬಹುದು.

ಮಧುಮೇಹ ಉಂಟಾಗುವ ಸಾಧ್ಯತೆ ಕಡಿಮೆ

ನಾರ್ಥ್‌ವೆಸ್ಟರ್ನ್‌ ವಿಶ್ವವಿದ್ಯಾನಿಲಯದಲ್ಲಿ ಒಂದು ಅಧ್ಯಯನ ನಡೆಸಲಾಯಿತು. ಯಾರು ಕತ್ತಲೆ ಕೋಣೆಯಲ್ಲಿ ಮಲಗುತ್ತಾರೋ ಅವರಿಗೆ ಮಧುಮೇಹ ಬರುವ ಸಾಧ್ಯತೆ ಕಡಿಮೆ.

ಮನಸ್ಸಿನ ಸ್ವಾಸ್ಥ್ಯ ಹೆಚ್ಚಿಸುತ್ತೆ

ಚೆನ್ನಾಗಿ ನಿದ್ದೆ ಮಾಡಿ ಎದ್ದರೆ ಮನಸ್ಸು ನಿರಾಳವಾಗುತ್ತೆ. ಗಾಢ ನಿದ್ದೆ 4-5 ಗಂಟೆ ಮಾಡಿದರೂ ಸಾಕಾಗುತ್ತೆ. ಬೇಗನೆ ಮಲಗುವ ಅಭ್ಯಾಸ ಮಾಡಿ, ಅಲ್ಲದೆ ಮಲಗುವ ಮುನ್ನ ಗ್ಯಾಡ್ಜೆಟ್‌ ನೋಡುವ ಅಭ್ಯಾಸ ಬಿಡಿ. ಮೊಬೈಲ್ ನೋಡಿ ಮಲಗುವವರಲ್ಲಿ ಖಿನ್ನತೆ, ಮಾನಸಿಕ ಒತ್ತಡ ಇವೆಲ್ಲಾ ಹೆಚ್ಚಾಗುತ್ತಿದೆ.

ಮೆಲಟೊನಿನ್‌ ಉತ್ಪತ್ತಿಗೆ ಸಹಕಾರಿ

ಮೊದಲ ಹೇಳಿದಂತೆ ರಾತ್ರಿ ಕೋಣೆಯನ್ನು ಮತ್ತಷ್ಟು ಕತ್ತಲೆ ಮಾಡಿ ಮಲಗುವುದರಿಂದ ಮೆಲಟೊನಿನ್ ಹಾರ್ಮೋನ್ ಉತ್ಪತ್ತಿ ಸಮತೋಲನದಲ್ಲಿರುತ್ತದೆ. ಮಹಿಳಯರಲ್ಲಿ ಮುಟ್ಟಿನ ಚಕ್ರ ಸರಿಯಾಗಿ ನಡೆಯಲು ಈ ಹಾರ್ಮೋನ್‌ಗಳ ಪಾತ್ರ ಮುಖ್ಯವಾಗಿದೆ, ಅಲ್ಲದೆ ಈ ಹಾರ್ಮೋನ್‌ ಒಬೆಸಿಟಿ, ಮಧುಮೇಹದಂಥ ಅಪಾಯ ಕಡಿಮೆ ಮಾಡುತ್ತೆ.

ಕಣ್ಣುಗಳಿಗೆ ವಿಶ್ರಾಂತಿ ನೀಡುತ್ತೆ

ಬೆಳಗ್ಗೆಯಿಂದ ನಮ್ಮ ಕಣ್ಣು ಮೊಬೈಲ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್ , ಟಿವಿ ಈ ಸ್ಕ್ರೀನ್‌ಗಳನ್ನು ನೋಡಿ ಕಣ್ಣು ತುಂಬಾ ಬಳಲಿರುತ್ತೆ. ಚೆನ್ನಾಗಿ ನಿದ್ದೆ ಮಾಡಿದರೆ ಕಣ್ಣಿಗೆ ವಿಶ್ರಾಂತಿ ಸಿಗುತ್ತೆ.

ತ್ವಚೆ ವಯಸ್ಸಾಗುವುದನ್ನು ತಡೆಗಟ್ಟುತ್ತೆ

ನಿಮಗೆ ವಯಸ್ಸು ಹೆಚ್ಚಾಗುತ್ತಿದ್ದರೂ ಆ ಯೌವನದ ಕಳೆ ಮಾಸಬಾರದೆಂದು ನೀವು ಬಯಸುವುದಾದರೆ ಚೆನ್ನಾಗಿ ನಿದ್ದೆ ಮಾಡಿ. ನಿದ್ದೆ ಬರುತ್ತಿಲ್ಲ ಎಂದು ಒದ್ದಾಡುವವರು ಮಾನಸಿಕ ಒತ್ತಡ ಹೊರಹಾಕಿ, ವ್ಯಾಯಾಮ ಮಾಡಿ, ರಾತ್ರಿ ಮಲಗುವಾಗ ಪಾದಗಳಿಗೆ ಮಸಾಜ್‌ ಮಾಡಿ ಚೆನ್ನಾಗಿ ನಿದ್ದೆ ಬರುತ್ತೆ.

ಮಲ


ಗುವ ಕೋಣೆಗೆ ಲೈಟ್‌ ಬೀಳುತ್ತಿದ್ದರೆ

ಕೆಲ ಬೆಡ್‌ರೂಂಗಳಲ್ಲಿ ಹೊರಗಡೆ ಬೀದಿದೀಪಗಳ ಬೆಳಕು ಕೋಣೆಯೊಳಗೆ ಬಂದು ನಿದ್ದೆ ಸರಿಯಾಗಿ ಬರುತ್ತಿಲ್ಲ ಎಂದಾದರೆ ದಪ್ಪವಾದ ಕರ್ಟನ್‌ ಬಳಸಿ.

 

 

 

 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries