ಕಣ್ಣೂರು: ಪೆರಿಯ ಅವಳಿ ಕೊಲೆಪ್ರಕರಣದ ಪ್ರಮುಖ ಆರೋಪಿಗೆ ಆಯುರ್ವೇದ ಚಿಕಿತ್ಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಕಣ್ಣೂರು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಸೂಚಿಸಲಾಗಿದೆ.
ಮಂಗಳವಾರ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸಿಬಿಐ ಕೋರ್ಟ್ ಸೂಚಿಸಿದೆ. ಮೊದಲ ಆರೋಪಿ ಮತ್ತು ಸಿಪಿಎಂ ನಾಯಕ ಪೀತಾಂಬರನ್‍ಗೆ 40 ದಿನಗಳ ಆಯುರ್ವೇದ ಉಪಶಾಮಕ ಚಿಕಿತ್ಸೆ ನೀಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸದ್ಯ ಪ್ರಮುಖ ಆರೋಪಿ ಎ.ಪೀತಾಂಬರನ್ ಕಣ್ಣೂರು ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ಪ್ರಕರಣದ ಮೊದಲ ಆರೋಪಿ. ಕಳೆದ ಅಕ್ಟೋಬರ್ 14 ರಂದು ಜೈಲಿನ ಅಧೀಕ್ಷಕರು ಆರೋಪಿಗೆ ನರ ಸಂಬಂಧಿ ದೌರ್ಬಲ್ಯ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದರು. ಆರೋಪಿಯನ್ನು ಪರೀಕ್ಷಿಸಿದ ಬಳಿಕ ಜೈಲು ವೈದ್ಯರು ತಜ್ಞ ಚಿಕಿತ್ಸೆಗೆ ಶಿಫಾರಸು ಮಾಡಿದ್ದಾರೆ. ಆರೋಪಿಯನ್ನು ಆಸ್ಪತ್ರೆಗೆ ಸೇರಿಸಬೇಕೆಂದು ವೈದ್ಯರು ಸೂಚಿಸಿದ್ದರು.
ನಂತರ ಅಕ್ಟೋಬರ್ 24 ರಂದು ಸಿಬಿಐ ನ್ಯಾಯಾಲಯದ ಅನುಮತಿ ಪಡೆಯದೆ ಜೈಲು ಅಧೀಕ್ಷಕ ವೈದ್ಯಕೀಯ ಮಂಡಳಿಯನ್ನು ರಚಿಸಿತು. ಈ ಮಂಡಳಿಯ ಶಿಫಾರಸಿನಂತೆ ಪೀತಾಂಬರನಿಗೆ 40 ದಿನಗಳ ಒಳರೋಗಿ ಚಿಕಿತ್ಸೆ ನೀಡಲು ನಿರ್ಧರಿಸಲಾಯಿತು. ಇದು ಪೀತಾಂಬರನ್ ಬೆನ್ನುನೋವು ಸೇರಿದಂತೆ ತೊಂದರೆಗಳನ್ನು ಅನುಭವಿಸುತ್ತಿರುವ ಕಾರಣದಿಂದ ಎನ್ನಲಾಗಿದೆ. ನಂತರ ಕಣ್ಣೂರು ಜಿಲ್ಲಾ ಆಯುರ್ವೇದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯಲ್ಲಿ ಸಿಬಿಐ ನ್ಯಾಯಾಲಯದ ಅನುಮತಿ ಪಡೆಯದೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಕೋರ್ಟ್ ಕಣ್ಣೂರು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದೆ.
ಪೆರಿಯ ಅವಳಿ ಕೊಲೆ ಪ್ರಕರಣದ ಮೊದಲ ಆರೋಪಿಗೆ ಪೀತಾಂಬರನಿಗೆ 40 ದಿನಗಳ ಆಯುರ್ವೇದ ಚಿಕಿತ್ಸೆ; ಜೈಲು ಅಧೀಕ್ಷಕರಿಗೆ ಸಮನ್ಸ್ ನೀಡಿದ ಸಿಬಿಐ ಕೋರ್ಟ್
0
ನವೆಂಬರ್ 21, 2022


