HEALTH TIPS

ಮುಂಬೈ ವಿಮಾನ ನಿಲ್ದಾಣದಲ್ಲಿ ಮೂವರ ಬಂಧನ, 4.1 ಕೋಟಿ ರೂ. ಮೊತ್ತದ ವಿದೇಶಿ ಕರೆನ್ಸಿ ವಶ

 

               ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದೇ ಕುಟುಂಬದ ಮೂವರನ್ನು ಬಂಧಿಸಿರುವ ಕಸ್ಟಮ್ ಅಧಿಕಾರಿಗಳು ಸುಮಾರು 4.1 ಕೋಟಿ ರೂ. ಮೊತ್ತದ ವಿದೇಶಿ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

             ಬುಧವಾರ ಎಫ್ ಝಡ್ 446 ವಿಮಾನದ ಮೂಲಕ ದುಬೈಗೆ ತೆರಳುತ್ತಿದ್ದ ಮೂವರು ಭಾರತೀಯ ಪ್ರಜೆಗಳನ್ನು ವಿಮಾ ನಿಲ್ದಾಣದಲ್ಲಿ ಪರಿಶೀಲಿಸಿದಾಗ 4,97,000 ಅಮೆರಿಕನ್ ಡಾಲರ್ ಅಂದಾಜು ರೂ. 4.1 ಕೋಟಿ ರೂ. ಮೊತ್ತದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.


          ಅಕ್ಟೋಬರ್ 27 ರಂದು ಕೋಟ್ಯಂತರ ರೂ. ಮೊತ್ತದ ಅಭರಣಗಳನ್ನು ಹೊಂದಿದ್ದ ಇಬ್ಬರು ಭಾರತೀಯರನ್ನು ಇಲ್ಲಿಯೇ ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದರು. ಅಕ್ಟೋಬರ್ 14 ರಂದು ಇದೇ ರೀತಿಯ ಪ್ರಕರಣ ನಡೆದಿತ್ತು. ಭಾರತೀಯ ಪ್ರಜೆಯೊಬ್ಬನನ್ನು ಬಂಧಿಸಿದ ಪೊಲೀಸರು ರೂ.8.40 ಕೋಟಿ ಮೊತ್ತದ 16 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದರು.

#WATCH | In a targeted op by AIU, Mumbai Airport Customs, a family of 3 Indian pax going to Dubai were intercepted. The baggage examination of the 3 led to seizure of foreign currency worth 4,97,000 USD (approx Rs 4.1 Cr). All 3 passengers were arrested: Customs (Source:Customs)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries