HEALTH TIPS

ಶಾಸಕ ಡಾ. ಭರತ್ ಶೆಟ್ಟಿ ಬಡಗು ಶಬರಿಮಲೆ ಉಬ್ರಂಗಳ ಕ್ಷೇತ್ರಕ್ಕೆ ಭೇಟಿ


           ಬದಿಯಡ್ಕ: ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರಕ್ಕೆ  ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಮಂಗಳವಾರ ಭೇಟಿ ನೀಡಿದರು. ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾಮಗಾರಿಗಳನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಡಿ.25ರಿಂದ ಜನವರಿ 5ರ ತನಕ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಎಲ್ಲಾ ವಿಧದ ಸಹಾಯವನ್ನು ನೀಡುವುದಾಗಿ ಹೇಳಿದರು.
        ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಪದಾಧಿಕಾರಿಗಳು  ಶಾಸಕರನ್ನು ಆಮಂತ್ರಿಸಿದರು. ಶ್ರೀ ಕ್ಷೇತ್ರದ ಪರವಾಗಿ  ಜಯರಾಜ್ ಕುಣಿಕುಳ್ಳಾಯ ಶಾಲು ಹೊದಿಸಿ ಬರಮಾಡಿಕೊಂಡರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಶಿರಂತ್ತಡ್ಕ,  ಬಾಬು ಮಾಸ್ತರ್ ಅಗಲ್ಪಾಡಿ, ರಮೇಶ್ ಕೃಷ್ಣ ಪದ್ಮಾರ್, ಬಾಲರಾಜ್ ಬೆದ್ರಡಿ, ಗೋಪಾಲ ಉಬ್ರಂಗಳ, ಗೋಪಾಲಕೃಷ್ಣ, ಉದಯ ಚೂರಿಕ್ಕೋಡು, ವೇಣುಗೋಪಾಲ್ ಚೂರಿಕ್ಕೊಡು ಮತ್ತಿರರು ಉಪಸ್ಥಿತರಿದ್ದರು. ಯುವಸಮಿತಿಯ ಅಧ್ಯಕ್ಷ ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಹರೀಶ್ ಗೋಸಾಡ ವಂದಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries