HEALTH TIPS

ಮಾತೃಭಾಷೆಯಲ್ಲೇ ತಾಂತ್ರಿಕ, ವೈದ್ಯಕೀಯ, ಕಾನೂನು ಶಿಕ್ಷಣ: ಅಮಿತ್ ಶಾ ಮನವಿ

 

               ನವದೆಹಲಿ: ಉತ್ತಮ ತಿಳಿವಳಿಕೆಗಾಗಿ ರಾಜ್ಯಗಳು ಮಕ್ಕಳಿಗೆ ಮಾತೃಭಾಷೆಯಲ್ಲೇ ತಾಂತ್ರಿಕ, ವೈದ್ಯಕೀಯ ಮತ್ತು ಕಾನೂನು ಶಿಕ್ಷಣವನ್ನು ಒದಗಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.

                   ಈ ಮೂಲಕ ಇಂಗ್ಲಿಷ್ ಪರಿಣಿತರಲ್ಲದ ವಿದ್ಯಾರ್ಥಿಗಳ ಪ್ರತಿಭೆಯನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಿದರು.

                 ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣದ ಮಹತ್ವವನ್ನು ಉಲ್ಲೇಖ ಮಾಡಿರುವ ಅಮಿತ್ ಶಾ, ವಿದ್ಯಾರ್ಥಿಗಳು ಮಾತೃಭಾಷೆಯಲ್ಲೇ ಶಿಕ್ಷಣವನ್ನು ಪಡೆದರೆ ನೈಜ ಆಲೋಚನೆಯನ್ನು ವೃದ್ಧಿಗೊಳಿಸಬಹುದು. ಈ ಮೂಲಕ ಸಂಶೋಧನೆ ಹಾಗೂ ಅವಿಷ್ಕಾರವನ್ನು ಉತ್ತೇಜಿಸಬಹುದು ಎಂದು ಹೇಳಿದರು.

                  ತಾಂತ್ರಿಕ, ವೈದ್ಯಕೀಯ, ಕಾನೂನು ಹೀಗೆ ಎಲ್ಲವನ್ನು ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಕಲಿಸಬೇಕು. ಈ ಮೂರು ವಿಷಯಗಳ ಪಠ್ಯಕ್ರಮವನ್ನು ಪ್ರಾದೇಶಿಕ ಭಾಷೆಗಳಲ್ಲಿ ಸರಿಯಾಗಿ ಭಾಷಾಂತರಿಸಲು ಎಲ್ಲ ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಹೇಳಿದರು.

                ಮಾತೃಭಾಷೆಯಲ್ಲಿ ಶಿಕ್ಷಣ ಸುಲಭ ಹಾಗೂ ವೇಗವಾಗಿ ಪಡೆಯಬಹುದು ಎಂದು ಒತ್ತಿ ಹೇಳಿರುವ ಅವರು, ಈ ಮೂಲಕ ಉನ್ನತ ಶಿಕ್ಷಣದಲ್ಲಿ ದೇಶದ ಪ್ರತಿಭೆಯನ್ನು ಉತ್ತೇಜಿಸಬಹುದು ಎಂದು ತಿಳಿಸಿದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries