HEALTH TIPS

ಜೀವನ ನೈಪುಣ್ಯ ತರಬೇತಿ ಕಾರ್ಯಕ್ರಮ ಸಮಾರೋಪ


         ಕಾಸರಗೋಡು: ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ(ಎನ್.ಎ.ಎಲ್.ಎಸ್.ಎ) ಮಾರ್ಗನಿರ್ದೇಶನದಲ್ಲಿ ಜಿಲ್ಲೆಯಲ್ಲಿ ಪ್ಯಾನ್ ಇಂಡಿಯಾ ಜಾಗೃತಿ ಕಾರ್ಯಕ್ರಮ ಮತ್ತು ಸಾಮಾಜಿಕ ನ್ಯಾಯ ಇಲಾಖೆ, ನೇರ್ ವಳಿ(ನೇರದಾರಿ) ಯೋಜನೆಯಡಿ ಜಿಲ್ಲಾ ಕಾನೂನು ಸೇವಾ ಸಂಸ್ಥೆ (ಡಿ.ಎಲ್.ಎಸ್.ಎ) ಮತ್ತು ಜೈಲು ಇಲಾಖೆ ಮತ್ತು ಜಿಲ್ಲಾ ಪ್ರೊಬೇಷನ್ ಕಛೇರಿ, ಸಂಯುಕ್ತಾಶ್ರಯದಲ್ಲಿ  ಲೋಕಾರೋಗ್ಯ ಸಂಘಟನೆಯ ಸಹಕಾರದೊಂದಿಗೆ ಜೀವನ ನೈಪುಣ್ಯಗಳನ್ನು ಆಧಾರವಾಗಿಟ್ಟುಕೊಂಡಿರುವ ಕಾನೂನು ಬೋಧನಾ ತರಬೇತಿ ಕಾರ್ಯಕ್ರಮ ಕಾಸರಗೋಡು ಸ್ಪೆಷಲ್ ಸಬ್ ಜೈಲಿನಲ್ಲಿ ಸಮಾಪನಗೊಂಡಿತು.
         ಸಮಾರೋಪ ಕಾರ್ಯಕ್ರಮವನ್ನು ಕಾಸರಗೋಡು ಜೆ.ಜೆ.ಬಿ.ಪ್ರಿನ್ಸಿಪಲ್ ನ್ಯಾಯಾಧೀಶ, ಜುಡೀಶಿಯಲ್ ಪ್ರಥಮ ವರ್ಗ ನ್ಯಾಯಾಧೀಶೆ ಆರ್.ವಂದನ ಉದ್ಘಾಟಿಸಿದರು. ಸಹಾಯಕ ಜುಡೀಶಿಯಲ್ ಪ್ರಥಮ ವರ್ಗ ನ್ಯಾಯಾಧೀಶೆ ಐಂಚಲ್ ರೋಸ್ ಜೋಸ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸ್ಪೆಶಲ್ ಸಬ್ ಜೈಲ್ ಮೇಲ್ವಿಚಾರಕ ಎನ್.ಗಿರೀಶ್ ಕುಮಾರ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ(ಡಿ.ಎಲ್.ಎಸ್.ಎ) ಸೆಕ್ಷನ್ ಅಧಿಕಾರಿ ಕೆ.ದಿನೇಶ, ಬೆಟರ್ ಲೈಫ್ ಫೌಂಡೇಶನ್ ಸ್ಥಾಪಕ ಮೋಹನ್‍ದಾಸ್ ಅವರು ಮಾತನಾಡಿದರು. ಜಿಲ್ಲಾ ಪ್ರೊಬೇಷನ್ ಅಧಿಕಾರಿ ಪಿ.ಬಿಜು ಸ್ವಾಗತಿಸಿ, ಎಸ್.ಪಿ.ಎಸ್.ಪಿ.ಎಸ್. ಲೈಫ್ ಸ್ಕೈಲ್ ತರಬೇತುದಾರ ಎನ್.ನಿರ್ಮಲ್ ಕುಮಾರ್, ಸುಭಾμï ವನಶ್ರೀ, ಅಕ್ಕರ ಫೌಂಡೇಶನ್ ಮ್ಯಾನೇಜರ್ ಮಹಮ್ಮದ್ ಯಾಸಿರ್ ಅವರು ತರಗತಿಗಳನ್ನು ನಡೆಸಿದರು. ತರಬೇತಿಯ ಭಾಗವಾಗಿರುವ ವಿವಿಧ ಪಂದ್ಯಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ನೀಡಲಾಯಿತು. ಮಾದಕ ವ್ಯಸನವನ್ನು ಆಧಾರವಾಗಿಟ್ಟುಕೊಂಡು ಮಾನಸಿಕ ಪರಿವರ್ತನೆ ಸಾಧ್ಯವಾದ ಕಿರುಚಿತ್ರಗಳ ಪ್ರದರ್ಶನ ಮತ್ತು ಅಪರಾಧಗಳಲ್ಲಿ ಒಳಗೊಂಡಿರುವವರನ್ನು ಸರಿದಾರಿಯಲ್ಲಿ ನಡೆಸುವ ವಿವಿಧ ಸೆಷನ್‍ಗಳು ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾಗಿ ಜಿಲ್ಲಾ ಪೆÇ್ರಬೇಷನ್ ಅಧಿಕಾರಿ ತಿಳಿಸಿದರು. ಅಪರಾಧಿಗಳನ್ನು ಸರಿಪಡಿಸಲು ಅಪರಾಧಗಳನ್ನು ತಗ್ಗಿಸಲು ಸಾಮಾಜಿಕ ನ್ಯಾಯ ಇಲಾಖೆ ಅನುಷ್ಠಾನಗೊಳಿಸುತ್ತಿರುವ ನೇರ್ ವಳಿ  ಯೋಜನೆಯ ಭಾಗವಾಗಿರುವ ಜಿಲ್ಲೆಯ ಎಲ್ಲಾ ಜೈಲುಗಳಲ್ಲಿ ತರಬೇತಿ ನೀಡಲಾಗಿದೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries