HEALTH TIPS

ನಿಮ್ಮ ಮಕ್ಕಳಿಗೆ ಅಜ್ಜ-ಅಜ್ಜಿ ಆರೈಕೆ ಸಿಕ್ಕರೆ ಮಾತ್ರ ಸಿಗುವ ಪ್ರಯೋಜನಗಳಿವು

 ಹಿಂದೆಯೆಲ್ಲಾ ಕೂಡು ಕುಟುಂಬ ಮನೆಯಲ್ಲಿ ಕಡಿಮೆಯೆಂದರೂ 8-10 ಮಕ್ಕಳಿರುತ್ತಿದ್ದರು, ಆದರೆ ತಾಯಂದಿರಿಗೆ ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ಸಮಸ್ಯೆಯಾಗುತ್ತಿರಲಿಲ್ಲ, ಮಕ್ಕಳು ಬೆಳೆದು ದೊಡ್ಡವರಾಗುವುದು ಗೊತ್ತೇ ಆಗುತ್ತಿರಲಿಲ್ಲ.

ಆದರೆ ಈಗಿನ ಬಹುತೇಕ ಕುಟುಂಬದಲ್ಲಿ ಗಂಡ-ಹೆಂಡತಿ ಅವರಿಗೆ ಒಂದು ಮಗು, ಹೆಚ್ಚೆಂದರೆ ಎರಡು ಮಗು ಆದರೆ ಮಕ್ಕಳನ್ನು ನೋಡಿಕೊಳ್ಳುವುದು ತುಂಬಾನೇ ಕಷ್ಟವಾಗುತ್ತಿದೆ ಏಕೆ?

ಏಕೆಂದರೆ ಈಗೀನ ಬಹುತೇಕ ಮನೆಗಳಲ್ಲಿ ಅಜ್ಜ-ಅಜ್ಜಿ ಇರಲ್ಲ, ಹೌದು ಯಾವ ಮನೆಗಳಲ್ಲಿ ಅಜ್ಜ-ಅಜ್ಜಿ ಇದೆಯೋ ಆ ಮನೆಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗಲ್ಲ. ಮದುವೆಯಾದ ಮೇಲೆ ಗಂಡ-ಹೆಂಡತಿ ಮಾತ್ರ ಇರಲು ಎಷ್ಟೋ ಜೋಡಿಗಳು ಇಷ್ಟಪಡುತ್ತಾರೆ, ಅವರು ತಾವು ತಮ್ಮ ಇಷ್ಟದಂತೆ ಬದುಕಬೇಕೆಂದು ಬಯಸುವುದು ತಪ್ಪಲ್ಲ, ಆದರೆ ಪೋಷಕರು ನಮ್ಮ ಜೊತೆ ಇರಲೇಬಾರದು ಎಂದು ಅಂದುಕೊಂಡಿದ್ದರೆ ಅಂಥವರು ತಮಗೆ ಮಕ್ಕಳಾದ ಮೇಲೆ ತಾವು ಮಾಡಿದ ತಪ್ಪಿನ ಬಗ್ಗೆ ಪಶ್ಚಾತಾಪ ಪಡಬೇಕಾಗುತ್ತದೆ:

ಮೊಮ್ಮಕ್ಕಳ ಆರೈಕೆಯಲ್ಲಿ ಅಜ್ಜ-ಅಜ್ಜಿಗೆ ಸರಿಸಾಟಿ ಬೇರೆಯೊಬ್ಬರಿಲ್ಲ
ನಿಮಗೆ ಬೇಕಾದರೆ ಕೇರ್‌ ಟೇಕರ್‌ ಸಿಗಬಹುದು, ಆದರೆ ಅವರಿಂದ ಅಜ್ಜ-ಅಜ್ಜಿಯಿಂದ ಸಿಗುವ ಪ್ರೀತಿ ಸಿಗುವುದೇ? ಖಂಡಿತ ಇಲ್ಲ. ಅವರು ನಿಮ್ಮ ಮಗುವಿಗೆ ಕೇರ್‌ ಟೇಕರ್‌ ಅಷ್ಟೇ ಆಗಿರುತ್ತಾರೆ, ಆದರೆ ಅಜ್ಜ-ಅಜ್ಜಿ ಮುದ್ದು ಮಾಡಿ ಬೆಳೆಸುವ ರೀತಿಯಲ್ಲಿ ಬೆಳೆಸಲು ಸಾಧ್ಯವಿಲ್ಲ.

ಅಜ್ಜ-ಅಜ್ಜಿಯ ಜೊತೆಯಿದ್ದರೆ ಮಕ್ಕಳಿಗೆ ಸುರಕ್ಷಿತೆ ಭಾವ
ಮಕ್ಕಳನ್ನು ನಿಮ್ಮ ಪೋಷಕರ ಜೊತೆ ಬಿಟ್ಟು ಹೋದಾಗ ನಿಮಗೂ ಆತಂಕವಿರಲ್ಲ, ಮಕ್ಕಳಿಗೂ ತುಂಬಾನೇ ಸುರಕ್ಷಿತ ಭಾವವಿರುತ್ತದೆ. ಅಜ್ಜ-ಅಜ್ಜಿ ಹಾಗೂ ಮಕ್ಕಳ ಜೊತೆಗಿನ ಬಾಂಧವ್ಯ ಉತ್ತಮವಾಗಿರುತ್ತದೆ. ಅಲ್ಲದೆ ಮಕ್ಕಳನ್ನು ಸಾಕಿ ಅವರಿಗೆ ಅನುಭವವಿರುವುದರಿಂದ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆ ಯಾವ ಮನೆಮದ್ದು ಕೆಲಸ ಮಾಡುತ್ತದೆ, ಮಕ್ಕಳ ಸುರಕ್ಷತೆ ಬಗ್ಗೆ ಹೇಗೆ ಎಚ್ಚರಿಕೆವಹಿಸಬೇಕು ಎಂಬುವುದೆಲ್ಲಾ ಗೊತ್ತಿರುತ್ತದೆ. ನಿಮ್ಮ ಕಣ್ಣು ಯಾವಾಗಲೂ ನಿಮ್ಮ ಮಕ್ಕಳ ಹಿಂದೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅವರು ನಿಮ್ಮ ಕಣ್ಣು ತಪ್ಪಿದಾಗ ಮೇಲೆ ಹತ್ತುವುದು, ಬೀಳುವುದು ಎಲ್ಲಾ ಇರುತ್ತೆ, ಆದರೆ ಅಜ್ಜ-ಅಜ್ಜಿ ಜೊತೆ ಬಿಟ್ಟು ನೋಡಿ ಅವರು ಸದಾ ಮಕ್ಕಳ ಹಿಂದೆಯೇ ಇದ್ದು ತುಂಬಾ ಎಚ್ಚರಿಕೆ ನೋಡಿಕೊಳ್ಳುತ್ತಾರೆ.

ಮಕ್ಕಳ ಮಾನಸಿಕ ಬೆಳವಣಿಗೆಗೂ ಅವಶ್ಯಕ
ಮಕ್ಕಳ ಮಾನಸಿಕ ಬೆಳವಣಿಗೆಗೆ ಅಜ್ಜ-ಅಜ್ಜಿಯ ಪ್ರೀತಿ ತುಂಬಾನೇ ಸಹಾಯ ಮಾಡುತ್ತದೆ ಎಂದು ಅದ್ಯಯನ ವರದಿಗಳು ಕೂಡ ಹೇಳಿವೆ. ಯಾವ ಮಕ್ಕಳ ತಮ್ಮ ಅಜ್ಜ-ಅಜ್ಜಿಯ ಪ್ರೀತಿ, ಆರೈಕೆ ಅನುಭವಿಸುತ್ತಾರೋ ಅಂಥ ಮಕ್ಕಳು ತುಂಬಾ ಖುಷಿಯಾಗಿರುತ್ತಾರೆ, ಈ ಬಾಂಧವ್ಯ ಅವರ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ಬದುಕಿಗೆ ಮೌಲ್ಯ ಕಳುಹಿಸುತ್ತಾರೆ
ತಮ್ಮ ಪರಂಪರೆ, ಮೌಲ್ಯವನ್ನು ಕಲಿಸುವ ಪ್ರಯತ್ನವನ್ನು ಅಜ್ಜ-ಅಜ್ಜಿ ಮಾಡುತ್ತಾರೆ. ಮೊಮ್ಮಕ್ಕಳು ತಂದೆ-ತಾಯಿಯಿಂದ ಕಲಿಯುವುದಕ್ಕಿಂತ ಅಜ್ಜ-ಅಜ್ಜಿಯಿಂದ ತುಂಬಾ ಮೌಲ್ಯ ಕಲಿಯುತ್ತಾರೆ. ಮಕ್ಕಳಿಗೆ ಯಾವುದು ತಪ್ಪು-ಯಾವುದು ಸರಿ ಎಂದು ಮಕ್ಕಳಲ್ಲಿ ಮಕ್ಕಳಾಗಿ ತಿಳಿಸಲು ಅವರಿಗೆ ಮಾತ್ರ ಸಾಧ್ಯ.

ಒಟ್ಟಿನಲ್ಲಿ ಹೇಳಬೇಕೆಂದರೆ ಅಜ್ಜ-ಅಜ್ಜಿ ಮಕ್ಕಳ ಬದುಕಿಗೆ ತುಂಬಾನೇ ಅವಶ್ಯಕ, ಈ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ.


 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries