HEALTH TIPS

ಆಯುಷ್ಮಾನ್‌ ಭಾರತ್‌ ಆರೋಗ್ಯ ಖಾತೆಗೆ 10 ಕೋಟಿ ದಾಖಲೆಗಳ ಜೋಡಣೆ

 

                 ನವದೆಹಲಿ: ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ (ಎಬಿಡಿಎಂ) ಅಡಿಯಲ್ಲಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಖಾತೆಗೆ 10 ಕೋಟಿಗೂ ಅಧಿಕ ಆರೋಗ್ಯ ದಾಖಲೆಗಳನ್ನು ಜೋಡಣೆ ಮಾಡಲಾಗಿದೆ.

             'ಎಬಿಡಿಎಂ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. 10 ಕೋಟಿಗೂ ಅಧಿಕ ಆರೋಗ್ಯ ದಾಖಲೆಗಳನ್ನು ಆಯುಷ್ಮಾನ್‌ ಭಾರತ್‌ ಆರೋಗ್ಯ ಖಾತೆಯೊಂದಿಗೆ ಜೋಡಿಸಲಾಗಿದೆ.

                 ನಮ್ಮ ಕಾರ್ಯಕ್ಕೆ ಕೈಜೋಡಿಸಿದ ದೇಶದ ಎಲ್ಲಾ ನಾಗರಿಕರಿಗೂ ನಾವು ಆಭಾರಿಯಾಗಿದ್ದೇವೆ. ದೇಶದಲ್ಲಿನ ಆರೋಗ್ಯ ಸೇವಾ ಸಂಸ್ಥೆಗಳಿಗೆ ಸಮಗ್ರ ವೈದ್ಯಕೀಯ ಮಾಹಿತಿ ಒದಗಿಸಲು ಇದರಿಂದ ಸಹಕಾರಿಯಾಗಲಿದೆ' ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌ಎಚ್‌ಎ) ಸಿಇಒ ಡಾ.ಆರ್‌.ಎಸ್‌.ಶರ್ಮಾ ಸೋಮವಾರ ಟ್ವೀಟ್‌ ಮಾಡಿದ್ದಾರೆ.

               ಈವರೆಗೂ 30 ಕೋಟಿಗೂ ಅಧಿಕ ಮಂದಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಖಾತೆಗಳನ್ನು (ಎಬಿಎಚ್‌ಎ) ಸೃಷ್ಟಿಸಿದ್ದಾರೆ ಎಂದು ಹೇಳಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries