ಕಾಸರಗೋಡು: ಮಧೂರು ಉಳಿಯತ್ತಡ್ಕದಲ್ಲಿ ನೀರ್ಚಾಲು ನಿವಾಸಿ ಮಹಮ್ಮದ್ ನಿಸಾರ್ ಎಂಬಾತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂದಿಸಿ ಮಧೂರು ಉಳಿಯತ್ತಡ್ಕ ನಿವಾಸಿ ಹಾಗೂ ಪ್ರಸಕ್ತ ಮಧೂರು ಅರಂತೋಡಿನಲ್ಲಿ ವಾಸಿಸುತ್ತಿರುವ ಪ್ರೀತಂ ಅಲಿಯಾಸ್ ಪ್ರಮೋದ್ ಎಂಬಾತನನ್ನು 13ವರ್ಷಗಳ ನಂತರ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
2010ರಲ್ಲಿ ಬೈಕಲ್ಲಿ ತೆರಳುತ್ತಿದ್ದ ಮಹಮ್ಮದ್ ನಿಸಾರ್ ಅವರನ್ನು ಪ್ರೀತಂ ಸೇರಿದಂತೆ ಏಳು ಮಂದಿಯ ತಂಡ ತಡೆದು ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನರಹತ್ಯಾ ಯತ್ನ ಪ್ರಕರಣದನ್ವಯ ಕೇಸು ದಾಖಲಿಸಿಕೊಂಡಿದ್ದರು. ಈ ಮಧ್ಯೆ ಪ್ರೀತಂ ವಿದೇಶಕ್ಕೆ ತೆರಳಿದ್ದನು. ಈತನ ಪತ್ತೆಗಾಗಿ ಪೊಲೀಸರು ರೆಡ್‍ಕಾರ್ನರ್ ನೋಟೀಸು ಜಾರಿಗೊಳಿಸಿದ್ದರು. ವಿದೇಶದಿಂದ ಆಗಮಿಸುತ್ತಿದ್ದಂತೆ ಈತನನ್ನು ಮುಂಬೈ ವಿಮಾನ ನಿಲ್ದಾಣದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇತರ ಆರೋಪಿಗಳ ವಿಚಾರಣೆ ಈಗಾಗಲೇ ನ್ಯಾಯಾಲಯದಲ್ಲಿ ಪೂರ್ತಿಗೊಂಡಿದೆ.
ಹತ್ಯಾ ಯತ್ನ 13 ವರ್ಷಗಳಿಂದ ತಲೆಮರೆಸಿಕೊಮಡಿದ್ದ ಆರೋಪಿ ಬಂಧನ
0
ಜನವರಿ 27, 2023


