ಕಾಸರಗೋಡು: ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿರುವ ಚಂದನಡ್ಕ ಶ್ರೀ ಚೀರುಂಬಾ ಭಗವತಿ ದೇವಸ್ಥಾನದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ನಡೆದುಬರುತ್ತಿರುವ ನಡಾವಳಿ-ಕಳಿಯಾಟ ಮಹೋತ್ಸವ ಜ. 31ರಿಂದ ಫೆ. 2ರ ವರೆಗೆ ಜರುಗಲಿರುವುದು. ಶಾಲಿಯಾ ಸಮುದಾಯದ 14 ನಗರ ದೇವಾಲಯಗಳಲ್ಲಿ ಚಂದನಡ್ಕ ಶ್ರೀ ಚೆರುಂಬಾ ಭಗವತಿ ಕ್ಷೇತ್ರ ಪ್ರಮುಖ ದೇಗುಲವಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಎ. ಉಮೇಶನ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಜನವರಿ 30 ರಂದು ಬೆಳಗ್ಗೆ 6 ಗಂಟೆಗೆ ಮಹಾಗಣಪತಿ ಹೋಮದೊಂದಿಗೆ ಉತ್ಸವ ಆರಂಭವಾಗಲಿದೆ. ನಂತರ ಮುಳ್ಳೇರಿಯ, ಕರ್ಮಂತೋಡಿ-ಕೋನಾಳ, ಅಡ್ಕ ಹಾಗೂ ಬೆಲರ್ಂ-ನೆಚಿಪಡ್ಪು ಸ್ಥಳೀಯ ಸಮಿತಿಗಳಿಂದ ಸಂಗ್ರಹಿಸಲಾದ ಹಣ್ಣು-ಧಾನ್ಯ ತುಂಬಿದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಮುಂಡೋಳ್ ಜಂಕ್ಷನ್‍ನಲ್ಲಿ ಜಮಾಯಿಸಿ ದೇವಸ್ಥಾನಕ್ಕೆ ತೆರಳಲಿದೆ. ಮಧ್ಯಾಹ್ನ 12 ಗಂಟೆಗೆ ಉಗ್ರಾಣಭರಣ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಸಾಂಸ್ಕøತಿಕ ಸಭಾಕಾರ್ಯಕ್ರಮ, ಮಾತೃಸಂಗಮ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸಾಮೀಜಿ ಆಶೀರ್ವಚನ ನೀಡುವರು. ಚಲನಚಿತ್ರ ನಟ ಮತ್ತು ನಿರ್ದೇಶಕ ಸಿದ್ಧಾರ್ಥ್ ಭರತನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣನ್ ಪಾಲ್ಗೊಳ್ಳುವರು. ನಂತರ ಸುಜೀನಾ ಸಿದ್ಧಾರ್ಥ್‍ಭರತನ್ ಅವರಿಂದ ನೃತ್ಯ ಪ್ರದರ್ಶನ, ನಾಗಸ್ವರ ವಾದನ, ತಾಯಂಬಕ, ದೀಪಾರಾಧನೆ, ರತ್ರಿ 9ಕ್ಕೆ ಶ್ರೀ ಚೆರುಂಬಾ ಭಗವತಿಯ ತಿಡಂಬು ನೃತ್ಯ ನಡೆಯುವುದು. 31ರಂದು ಬೆಳಗ್ಗೆ 11.30ಕ್ಕೆ ದರ್ಶನಬಲಿ, ರಾತ್ರಿ 11ಕ್ಕೆ ಪಡವೀರನ್ ದೈವದ ವೆಳ್ಳಾಟ ನಡೆಯುವುದು. ಫೆ. 1ರಂದು ಬೆಳಗ್ಗೆ 3ಕ್ಕೆ ವಿವಿಧ ದೈವಗಳ ನರ್ತನಸೇವೆ ನಡೆಯುವುದು. ಫೆ. 2ರಂದು ಮಹೋತ್ಸವ ಸಂಪನ್ನಗೊಳ್ಳುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷೆ ಎಂ.ಶ್ರೀಧರನ್, ಕೋಶಾಧಿಕಾರಿ ಸಿ. ಎಚ್. ಶ್ರೀಧರನ್, ಕೆ.ಪುರುಷೋತ್ತಮನ್, ಪ್ರಚಾರ ಸಮಿತಿ ಅಧ್ಯಕ್ಷ ಕೆ.ವಿ. ಪದ್ಮೇಶ್ ಉಪಸ್ಥಿತರಿದ್ದರು.
ಕಾರಡ್ಕ ಚೀರುಂಬಾ ಭಗವತೀ ಕ್ಷೇತ್ರದಲ್ಲಿ 30ರಿಂದ ನಡಾವಳಿ-ಕಳಿಯಾಟ ಮಹೋತ್ಸವ
0
ಜನವರಿ 27, 2023

